ವಂಡ್ಸೆ (ಜೂ, 8): ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕಿನ ಕಾರ್ಯಕರ್ತರು
ಬೆಳ್ಕಲ್ ತೀರ್ಥದ ಪಾವಿತ್ರ್ಯತೆಯ ಉಳಿವಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ಮನವಿಗೆ
ಬೈಂದೂರು ಶಾಸಕ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಸ್ಪಂದಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಶಾಸಕರು ಬೆಳ್ಕಲ್ ತೀರ್ಥದ ಕ್ಷೇತ್ರದ ಪಾವಿತ್ರ್ಯತೆ ಉಳಿವಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಸಿ, ತೀರ್ಥ ಸ್ಥಾನಕ್ಕೆ ಹೋಗುವವರು ಯಾವುದೇ ಮಾಂಸದ ಊಟ,ಪ್ಲಾಸ್ಟಿಕ್ ಬಾಟಲಿ,ಮದ್ಯ ತೆಗೆದುಕೊಂಡು ಹೋಗದಂತೆ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಸೂಚಿಸಿದರು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಬೈಂದೂರು ಇದರ ಕಾರ್ಯಕರ್ತರು ಉಪಸ್ಥಿತರಿದ್ದರು.












