ಬೆಂಗಳೂರು (ಜು, 10) : ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾ ದೇಶಲ್ಲಿ ವಿಶ್ವದ ಅತ್ಯಂತ ಕುಬ್ಬ ಕರು ಜನಿಸಿದೆ.
ಕೇವಲ 26 ಇಂಚು (66 ಸೆಂ.ಮೀ) ಎತ್ತರ, 26 ಕೆಜಿ ತೂಕವಿರುವ ರಾಣಿ ಹೆಸರಿನ ಈ ಕುಬ್ಜ ಕರು ಬಾಂಗ್ಲಾ ದೇಶದ ರಾಜಧಾನಿಯಾದ ಢಾಕಾ ಸಮೀಪದ ಚರಿಗ್ರಾಮ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದೆ. ಈಗಾಗಲೇ ವಿಶ್ವದ ಅತಿ ಕುಬ್ಬ ಕರುವೆಂದು ಗಿನ್ನೆಸ್ ದಾಖಲೆಗೆ ಸೇರಿರುವ ಕರುವಿಗಿಂತ ಈ ಕರು 10 ಸೆಂ.ಮೀ. ಗಿಡ್ಡವಾಗಿರುವುದು ವಿಶೇಷ.