ಕುಂದಾಪುರ (ಮೇ, 03): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 99.05 ಫಲಿತಾಂಶವನ್ನು ದಾಖಲಿಸುವುದರ ಜೊತೆಗೆ 8 ರ್ಯಾಂಕ್ ಗಳನ್ನು ಪಡೆದುಕೊಂಡಿದೆ.
ಸಂಸ್ಥೆ ಯ ವಿದ್ಯಾರ್ಥಿಗಳಾದ ಸಾಹಿ ಸ್ಪರ್ಶ ಕೆ. 625 ರಲ್ಲಿ 623 ಅಂಕಗಳನ್ನು ಪಡೆದು ರಾಜ್ಯಕ್ಕೆ 3 ನೇ ರ್ಯಾಂಕ್ , ಬಿ . ವಿ ಜಯಸೂರ್ಯ ಹಾಗೂ ಪ್ರಿಯ 625 ರಲ್ಲಿ 622 ಪಡೆದು 4 ನೇ ರ್ಯಾಂಕ್, ಭಕ್ತಿ ಶೆಟ್ಟಿ ಹಾಗೂ ನಿರೀಕ್ಷಾ ಎನ್. ಶೆಟ್ಟಿಗಾರ್ 625 ರಲ್ಲಿ 621 ಅಂಕಗಳನ್ನು ಪಡೆದು 5 ನೇ ರ್ಯಾಂಕ್ ,ಸನ್ವಿತ ಶೆಟ್ಟಿ ಹಾಗೂ ವಿನ್ಯಾಸ ಅಡಿಗ 625 ರಲ್ಲಿ 619 ಅಂಕಗಳನ್ನು ಪಡೆದು 7 ನೇ ರ್ಯಾಂಕ್ ಹಾಗೂ ಸಮನ್ವಿ . ಎಸ್ 625 ರಲ್ಲಿ 616 ಅಂಕಗಳನ್ನು ಪಡೆದು 10ನೇ ರ್ಯಾಂಕ್ ಪಡೆದು ಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಯ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಅಡಳಿತ ಮಂಡಳಿಯ ಸರ್ವ ಸದಸ್ಯರು , ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಹಾಗೂ ಭೋಧಕ & ಭೋಧಕೇತರ ವೃಂದ ಅಭಿನಂದನೆ ಕೋರಿದ್ದಾರೆ.