ಗಂಗೊಳ್ಳಿ (ಜು, 12) : ಸಾಧಕ ಹರೀಶ್ ಖಾರ್ವಿ ಮಾಲಿಕತ್ವದ ಸತೀಶ್ ಜಂಟ್ಸ್ & ಲೇಡೀಸ್ ಫಿಟ್ನೆಸ್ ಜಿಮ್ ಜುಲೈ 11 ರಂದು ಗಂಗೊಳ್ಳಿಯ ಮುಖ್ಯರಸ್ತೆಯ ತತ್ವಮಸಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಆಧುನಿಕ ಶೈಲಿಯ ಸುಸಜ್ಜಿತವಾದ ಈ ಜಿಮ್ ನ್ನು ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.
ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಸೋಮಶೇಖರ್ ಖಾರ್ವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಸದಾಶಿವ ಖಾರ್ವಿ ಹಾಗೂ ಶ್ರೀವಿಜಯ್ ಶೆಣೈ ವೆಂಕಟೇಶ ಕ್ರಪಾ ಗಂಗೊಳ್ಳಿ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಹಾಗೆಯೇ ಪೆಗಾಸಸ್ ಫಿಟ್ನೆಸ್ ಜಿಮ್ ಕುಂದಾಪುರ ಇದರ ಮಾಲೀಕರಾದ ಆದರ್ಶ ಕುಂದಾಪುರ, ಜೂನಿಯರ್ ಗುರುಕಿರಣ್ ಖ್ಯಾತಿಯ ಕಲಾವಿದ ನಾಗರಾಜ ಖಾರ್ವಿ ಇನ್ನಿತರರು ಉಪಸ್ಥಿತರಿದ್ದು ಹರೀಶ್ ಖಾರ್ವಿಯವರಿಗೆ ಶುಭಹಾರೈಸಿದರು. ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ದೈನಂದಿನ ವ್ಯಾಯಾಮ ಅತ್ಯವಶ್ಯಕ, ಜನರ ಬೇಡಿಕೆಗೆ ಅನುಗುಣವಾಗಿ ಆಧುನಿಕ ಮಾದರಿಯಲ್ಲಿ ಜಿಮ್ ನ್ನು ಸಂಯೋಜಿಸಲಾಗಿದೆ. ಜಿಮ್ ಆಸಕ್ತರ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಜಿಮ್ ಮಾಲೀಕ & ದೇಹದಾಡ್ಯಪಟು ಶ್ರೀ ಹರೀಶ್ ಖಾರ್ವಿ ತಿಳಿಸಿರುತ್ತಾರೆ.
ಹಲವು ದಾಖಲೆಗಳು ವೀರ ಶ್ರೀಹರೀಶ್ ಖಾರ್ವಿ :
ಹುಟ್ಟು ಅಂಗವಿಕಲನಾಗಿರುವ ಹರೀಶ್ ಖಾರ್ವಿ ಹಲವು ದಾಖಲೆಗಳ ಸರದಾರರಾಗಿದ್ದಾರೆ. ಅಂಗವೈಕಲ್ಯಕ್ಕೆ ಸವಾಲೆಸೆದು ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಒಂಟಿಕಾಲಿನಲ್ಲಿ ಸೈಕಲ್ ತುಳಿದು ಸಾಹಸ ಮೆರೆದಿದ್ದ ಹರೀಶ್ ಖಾರ್ವಿಯವರಿಗೆ ಸ್ವತಃ ಧರ್ಮಸ್ಥಳ ದೇವಾಲಯದ ಧರ್ಮದರ್ಶಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈತನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿದ್ದಾರೆ. ಖ್ಯಾತ ನೃತ್ಯಪಟು ಆಗಿರುವ ಹರೀಶ್ ಖಾರ್ವಿ ಉದಯ ಟಿವಿಯಲ್ಲಿ ಪ್ರಸಾರವಾದ ಚಾಂಪಿಯನ್ಸ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ತೀರ್ಪುಗಾರರ ಗಮನಸೆಳೆದಿದ್ದಾರೆ. ಸ್ವತಃ ದೇಹದಾಡ್ಯಪಟುವಾಗಿರುವ ಹರೀಶ್ ಕಾರ್ವಿ ಮಿಸ್ಟರ್ ಉಡುಪಿ ಹಾಗೂ ಮಿಸ್ಟರ್ ಕುಂದಾಪುರ ಪ್ರಶಸ್ತಿಯನ್ನು ಪಡೆದಿದ್ದಾರೆ.