ಕುಂದಾಪುರ(ಆ,27): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಂತ್ರಜ್ಞರಾದ ಶ್ರೀ ವೀರೇಂದ್ರರವರು ವಿದ್ಯಾರ್ಥಿಗಳಿಗೆ ರಕ್ತವನ್ನು ನೀಡಲು ಹೇಗೆ ಸಹಾಯಕರಾಗಬೇಕು ಜೊತೆಗೆ ರಕ್ತ ಸಂಗ್ರಹ, ಪರಿಷ್ಕರಣೆ, ಮತ್ತು ಸಂಗ್ರಹಿಸಿದ ರಕ್ತದ ಪ್ರಕ್ರಿಯೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಭಾಪತಿಗಳಾದ ಶ್ರೀ ಜಯಕರ ಶೆಟ್ಟಿ, ಕಾರ್ಯದರ್ಶಿಗಳಾದ ಸೀತರಾಮ್ ಶೆಟ್ಟಿ, ಖಜಾಂಚಿಗಳಾದ ಶಿವರಾಮ ಶೆಟ್ಟಿ ಹಾಗೂ ಸದಸ್ಯರಾದ ಗಣೇಶ್ ಆಚಾರ್,ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಹಾಗೂ ಮಾಲತಿ ಉಪಸ್ಥಿತರಿದ್ದರು.