ಹುಟ್ಟು ಸಾವಿನ ಮಧ್ಯದಲ್ಲಿ
ಅಲ್ಪ ದಿನದ ಈ ಬದುಕಿನಲ್ಲಿ
ಬಂದು ಹೋಗುವವರು ಹಲವರು
ಕೊನೆ ತನಕ ಉಳಿಯುವವರು ಕೆಲವರು
ತಂದೆ ತಾಯಿಗೆ ತಕ್ಕ ಮಕ್ಕಳಾಗಿ
ಗುರು ಹಿರಿಯರಿಗೆ ಗೌರವಿಸಿ
ಸಮಾಜಕ್ಕೆ ಮಾದರಿಯಾಗಿ
ಬದುಕ ಬೇಕೆನ್ನುವ ಬಯಕೆ
ಬದುಕ ಪುಟಗಳು ನಮಗರಿವಿಲ್ಲದೇ ಸರಿಯುತಿದೆ
ಕಾಲಚಕ್ರದ ಸುಳಿಯಲಿ
ಬದುಕ ಪಯಣವ ನಿಲ್ಲಿಸಲು!
ಹೆದರಬೇಕಿಲ್ಲ! ಅದು ಪ್ರಕ್ರತಿಯ ನಿಯಮ
ಇರುವಷ್ಟು ದಿನ ಆಗ ಬಯಸುವ ವಿಶ್ವ ಮಾನವ
ಎಲ್ಲರಿಗೂ ಹಂಚುವ ಪ್ರೀತಿ ಸ್ನೇಹವ
ಸಾರ್ಥಕ ಜೀವನದ ನಿರೀಕ್ಷೆಯಲಿ ಪ್ರತಿ ಕ್ಷಣವ
ಬನ್ನಿ, ಇರುವಷ್ಟು ದಿನ ಉತ್ಸಾಹದಿ ಬದುಕುವ ..
ಎ ಎಸ್ ಪೂಜಾರಿ ಕಾಡಿನಕಲ್ಲು
ಇಡೂರು ಕುಂಜ್ಞಾಡಿ