ಯೌವ್ವನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತಲ್ಲಣವನ್ನು ಸ್ರಷ್ಠಿ ಮಾಡದೇ ಇರದು. ಆ ಸಮಯದಲ್ಲಿ ಯಾರ ಆಕರ್ಷಣೆ ಯಾವ ದಿಕ್ಕಿನೆಡೆಗೆ ತಿರುಗುತ್ತದೆ ಎಂದು ಹೇಳುದೇ ಕಷ್ಟ. ಕ್ಷಣ ಮಾತ್ರದಲಿ ಬೇರೆ ಬೇರೆ ಆಲೋಚನೆಗಳು….. ಗುಪ್ತಗಾಮಿನಿಯಂತೆ ಹರಿಯುವ ಚಿಂತನೆಗಳು..
ಯಾವುದು ಸರಿ? ಯಾವುದು ತಪ್ಪು? ಎನ್ನುವ ಚಂಚಲ ಮನಸ್ಥಿತಿ. ಕೆಲವರು ಸಕಾರಾತ್ಮಕ ಚಿಂತನೆಗೆ ಒಳಗಾದರೆ ಇನ್ನು ಕೆಲವರು ನಕಾರಾತ್ಮಕ ಚಿಂತನೆಗೆ ಸಿಲುಕಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದು..
ಯಾಕೋ ತಿಳಿಯದು …. ಬೋರ್ಗೆರೆವ ಕಡಲ ಎದುರು ಸುಮ್ಮನೆ ಕುಳಿತು ಅಲೆಗಳ ನಾದವನ್ನು ಕೇಳುತ್ತಾ ತಂಪಾದ ಗಾಳಿಯಲಿ ಶಾಂತ ವಾತಾವರಣ ಕಡೆ ನೆಡೆಯಬೇಕೆಂದನಿಸುತ್ತಿದೆ.ನೆಮ್ಮದಿ, ಶಾತಿಯತ್ತ ಪಯಣ ಬೆಳೆಸುತ್ತಿದ್ದೆ. ಪದೇ ಪದೇ ಆಧ್ಯಾತ್ಮಿಕ ಚಿಂತನೆಗಳು ತಲೆಯನ್ನು ಸುತ್ತಿಕೊಳ್ಳುತ್ತಿದೆ.ಧ್ಯಾನ ಮಾಡಬೇಕೇನಿಸುವುದು, ಒಂಟಿಯಾಗಿ ಇರಬೇಕೇನಿಸುವುದು, ಖಾಲಿ ಕುಳಿತಗೆಲ್ಲಾ ಜೀವನ ಚರಿತ್ರೆಗಳು ಓದಬೇಕೇನಿಸುವುದು, ಚಿಕ್ಕ ಮಕ್ಕಳೊಂದಿಗೆ ಮಗುವಾಗಬೇಕೆನಿಸುವ ಅಸೆ…….ಎಲ್ಲವೂ ಅರಿತ ಹಿರಿಯರೊಂದಿಗೆ ಅನುಭವಗಳನ್ನು ಕೇಳಬೇಕೆಂಬ ಅಸೆ, ಹೆಚ್ಚು ಹೆಚ್ಚು ಜ್ಞಾನ ಪಡೆಯಬೇಕೆಂಬ ಹುಚ್ಚು ದುರಾಸೆ..ಹೀಗೇಕೆ ಮನ ದಾರಿ ತಪ್ಪುತ್ತಿದೆ ಎನ್ನೋ ಅಷ್ಟರಲ್ಲಿ ದಿನನಿತ್ಯದ ಕೆಲಸದಲ್ಲಿ ನಿರತರಾಗುವುದು..
ಬಿಡುವಿನ ಸಮಯದಲ್ಲಿ ಅದೇ ಮತ್ತದೇ ಆಕರ್ಷಣೆ ….. ಗೆಳೆಯ, ಗೆಳತಿಯರ ಸಮೂಹ ಬೇಡ .ಈ ನಿರತ ಬದುಕಿನ ಜಂಜಾಟ ಬೇಡ. ಪರಿಸರದ ಸೊಬಗನ್ನು ಸವಿಯುವ ಅಸೆ, ಮನುಷ್ಯರಿಲ್ಲದ ಭೂಮಿಯಲಿ ಪಶು ಪಕ್ಷಿಗಳ ಜೊತೆ ನಾನು ಒಬ್ಬಳೇ ಮನುಷ್ಯಳಾಗಿ ಇರಬೇಕೆನಿಸುತ್ತದೆ. ಮಾನವೀಯ ಮೌಲ್ಯಗಳನ್ನು ಅವುಗಳಿಂದ ಕಲಿಯಬೇಕೇನಿಸುತ್ತದೆ. ಸಾಲಾಗಿ ಹೋಗುವ ಇರುವೆಗಳ ಮಾತಿಗೆ ಕಿವಿಯಾಗಬೇಕೆನಿಸುತ್ತದೆ. ಹೀಗೆ ಹೇಳುತ್ತಾ ಹೋದರೆ ಪದಗಳೇ ಸಾಲದು……
ಈ ನೈಸರ್ಗಿಕ ಬದುಕಿನಲ್ಲಿ “ಜನನ ಮರಣಗಳು ಸ್ವಾಭಾವಿಕ. ಹುಟ್ಟನ್ನು ಏಕೆ ಸಂಭ್ರಮಿಸಬೇಕು? ಮರಣವನ್ನು ಏಕೆ ದುಃಖ್ಖಿಸಬೇಕೇನಿಸುತ್ತದೆ. “ಭಾವನೆ “ಗಳು ಅತಿಯಾದಾಗ ದುಃಖ್ಖಕ್ಕೆ ಎಡೆಮಾಡಿ ಕೊಡುತ್ತದೆ. ಹಾಗೆಯೇ ಅದೇ ದುಃಖ್ಖವು ಮುಂದೊಂದು ದಿನ ಕಲ್ಲಾಗಿ ನಿಲ್ಲಿಸಿ ಬಿಡುತ್ತದೆ ಎಂಬ ದ್ರಢ ಸಂಕಲ್ಪ….
ಶಾಂತವಾಗಿರಬೇಕೆನಿಸುತ್ತದೆ ಮನಸ್ಸು .,ಕೆಲವೊಮ್ಮೆ ಅತೀ ಶಾಂತಿಯಿಂಸಾಗಿ ಗೊಂದಲಕ್ಕೆ ಜಾರಿ ಆಶಾಂತಿಯತ್ತ ತಿರುಗುವ ಭಯ. ಮಾತನಾಡುವವರ ನಡುವೆ ಕುಳಿತು ಮಾತನಾಡಬೇಕೆನಿಸುತ್ತದೆ ಆದರೆ ಕೆಲವೊಮ್ಮೆ ಅನಗತ್ಯ ಮಾತು ಕೇಳಿದಾಗ ” ಮೌನ ಪರಿಶುದ್ಧ ಮಾತು ಬರಿ ಶಬ್ದ ” ಏನಿಸಿ ಬಿಡುತ್ತದೆ. ಮನುಷ್ಯ ಪ್ರಾಣಿಗಳಲ್ಲಿ ವ್ಯತ್ಯಾಸ ಕಂಡುಬರುದಿಲ್ಲ.
ಹೀಗೆ ತುಂಬಾ ಜಾಸ್ತಿ ಯೋಚಿಸಿದಾಗ ಆ ಬದುಕಿಗೆ ಆಕರ್ಷತಳಾಗಿ ಬಿಡುತ್ತೆನೆ ಎಂಬ ಭಯ. ಇದೆಲ್ಲದರ ನಡುವೆ ಕೊನೆಗೆ ಅನ್ನಿಸುವುದು ನಾವು ವಾಸ್ತವಿಕ ಬದುಕಿನೆಡೆಗೆ ಸಾಗಬೇಕೆನ್ನಿಸುವುದು.
ಅಕ್ಷತಾ ಕಾಂಚನ್