ಭಾಗಮಂಡಲ (ಜು, 17) : ಕೋವಿಡ್ ಸಂಕಷ್ಟ ಹಾಗೂ ಸವಾಲುಗಳ ನಡುವೆಯೂ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮ ಗಳೊಂದಿಗೆ ಈ ಬಾರಿಯ ಎಸ್. ಎಸ್. ಎಲ್. ಸಿ. ಪರೀಕ್ಷೆ ಯನ್ನು ಇದೇ ಜುಲೈ 19 ರಿಂದ ನಡೆಸಲು ತೀರ್ಮಾನಿಸಿದೆ. ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಸರ್ಕಾರದ ವತಿಯಿಂದ ಮಾಡಲಾಗಿದೆ.
ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕ ವಾಗಿ ಬಸ್ಸು ತಪ್ಪಿ ಹೋದ ತುರ್ತು ಸಂದರ್ಭ ಎದುರಾದರೆ ವಿದ್ಯಾರ್ಥಿಗಳಿಗೆ ಭಾಗಮಂಡಲ ಕಾವೇರಿ ಆಟೋ ಚಾಲಕರ ಸಂಘ ಉಚಿತ ಸೇವೆ ನೀಡಲು ತಿರ್ಮಾನಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ತುರ್ತು ಸಂದರ್ಭದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಭಾಗಮಂಡಲ ಆಟೋ ಚಾಲಕರ ಸಂಘದ ವತಿಯಿಂದ ತಿಳಿಸಿದ್ದಾರೆ.
ಅಧ್ಯಕ್ಷರು : 9480499703 (ಪಾಣತ್ತಲೆ ನಂದ )
ಕಾರ್ಯದರ್ಶಿ : 9481420507 (ಶ್ರೀನಾಥ್ ನಾಯಕ್ )
9449915535 (ವಿಜಯ ಕುಮಾರ್ )