ಉಪ್ಪುಂದ (ಜು, 18) : ಬಿಜೂರು ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಹಾಗೂ ಹೊಳೆತೋಟ ಅಂಗನವಾಡಿ ಕಟ್ಟಡವನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು ಸ್ಥಳೀಯಾಡಳಿತದ ಜವಾಬ್ದಾರಿಯ ಕುರಿತು ತಿಳಿಸಿದರು. ಬಿಜೂರು ಶಾಲೆ ರಸ್ತೆಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ನಡೆಸುವುದರ ಜೊತೆಗೆ ಬಾಕಿ ಇರುವ 94ಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಬಿಜೂರು ಗ್ರಾ.ಪಂ. ಅಧ್ಯಕ್ಷ ರಮೇಶ ವಿ.ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ, ನಿವೃತ್ತ ಶಿಕ್ಷಕ ಹೆರಿಯಣ್ಣ ರಾವ್ ಹೊಸ್ಕೋಟೆ, ಬಿ.ಜೆ.ಪಿ. ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ, ಜಿ.ಪಂ.ಮಾಜಿ ಸದಸ್ಯೆ ಗೌರಿ ದೇವಾಡಿಗ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ
ಖಂಬದಕೋಣೆ ರೈತರ ಸೇ.ಸ. ಸಂಘದ ನಿರ್ದೇಶಕರಾದ ರಘರಾಮ ಶೆಟ್ಟಿ, ಕಂಚಿಕಾನ್ ಪುಂಡಲೀಕ ಕಿಣಿ, ಅಣ್ಣಪ್ಪ ಶೇರಿಗಾರ್, ಮಂಜು ದೇವಾಡಿಗ, ಅಣ್ಣಪ್ಪ ನಾಯ್ಕ ಬವಳಾಡಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.