ಕುಂದಾಪುರ(ಜು 22) : ಲಯನ್ಸ್ ಜಿಲ್ಲೆ 317 ಸಿ, ಪ್ರಾಂತ್ಯ 5 ರ ವ್ಯಾಪ್ತಿಯ, ವಲಯ 2 ರ ವಲಯಾಧ್ಯಕ್ಷರಾಗಿ ಕುಂದಾಪುರದ ಪ್ರತಿಷ್ಠಿತ ಜೆ.ಕೆ ಹೋಟೆಲ್ ನ ಆಡಳಿತ ಪಾಲುದಾರರು, ಯುವ ಉದ್ಯಮಿ, ರಾಜಕೀಯ ಧುರೀಣರು, ಸಮಾಜ ಸೇವಕರು ಹಾಗೂ ಕೊಡುಗೈ ದಾನಿಯಾದ ಲ. ಅಶೋಕ್ ಶೆಟ್ಟಿ ಸಂಸಾಡಿ Mjf ಯವರನ್ನು ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ನಿಯುಕ್ತಿಗೊಳಿಸಿದ್ದಾರೆ.
ಲ. ಅಶೋಕ್ ಶೆಟ್ಟಿ ಸಂಸಾಡಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ವಲಯ ಕಾರ್ಯದರ್ಶಿಯಾಗಿ ಕುಂದಾಪುರದ ಲೆಕ್ಕ ಪರಿಶೋಧಕರಾದ ಲ. ಕಿರಣ್ ಕುಮಾರ್ ರವರನ್ನು ನೇಮಿಸಲಾಗಿದೆ. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಲಯನ್ಸ್ ಕ್ಲಬ್ ಕುಂದಾಪುರ ಮೈನ್, ಕುಂದಾಪುರ ಇಂಜಿನಿಯರ್ಸ್ ಕ್ಲಬ್, ವಡೇರಹೋಬಳಿ ಕ್ಲಬ್, ಕುಂದಾಪುರ ಕ್ರೌನ್ ವಲಯ 2 ರ ವ್ಯಾಪ್ತಿಗೆ ಸೇರಿವೆ.