ಬೆಂಕಿಯನ್ನು ಮನೆಯೊಳಗೆ ಚಿಕ್ಕದಾಗಿ ಹಚ್ಚಿಟ್ಟರೆ ದೀಪವಾಗಿ ಮನೆ ಬೆಳಗುತ್ತದೆ. ಅದೇ ಮನೆಗೆ ಹಚ್ಚಿದರೆ ಮನೆಯನ್ನೇ ಸುಟ್ಟು ನಾಶ ಮಾಡುತ್ತದೆ. ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತ ,ವಿಷಯ ,ವಿಚಾರ ಹಾಗೂ ಭಾವನೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ಫೇಸ್ ಬುಕ್ ಹಾಗೂ ಇತರ ಸೋಶಿಯಲ್ ಮೀಡಿಯಾಗಳು ಇಂದು ಇಡೀ ಜಗತ್ತನ್ನೇ ಆವರಿಸಿದೆ.
ಆದರೆ ಈ ಸೋಶಿಯಲ್ ಮೀಡಿಯಾಗಳನ್ನು ನಾವು ದೀಪದಂತೆ ನಾವು ಆರೋಗ್ಯಕರವಾಗಿ ಬಳಸುವುದು ಉತ್ತಮ. ಇಲ್ಲವಾದರೆ ಇದು ಮನೆಯೊಳಗಿನ ದೀಪವಾಗದೆ ಮನೆಗೆ ಹಚ್ಚಿದ ಬೆಂಕಿಯಂತಾಗಿ ಬದುಕಿನೊಳಗಿನ ಸಂಬಂಧವನ್ನು ನಾಶಮಾಡುತ್ತ ಬದುಕನ್ನೆ ಸುಟ್ಟು ಬಿಡುತ್ತದೆ. ಪ್ರಪಂಚದಲ್ಲಿ ಯಾವುದೂ ಒಳ್ಳೆಯದಲ್ಲ, ಯಾವುದು ಕೆಟ್ಟದ್ದಲ್ಲ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳ ಪರಿಣಾಮ ನಿಂತಿದೆ ಅಷ್ಟೇ.
ಇತ್ತೀಚಿನ ಬೆಳವಣಿಗೆಯನ್ನು ಕಂಡ ಕಣ್ಣುಗಳು ಮನಸ್ಸಿ ಒಳಗೆ ಜಾಗ್ರತೆಯ ಸಂದೇಶವನ್ನು ಬಡಿದೆಬ್ಬಿಸುತ್ತಿದೆ. ಅದಕ್ಕಾಗಿ ಬೆರಳುಗಳು ಬರವಣಿಗೆ ಬಯಸಿದೆ…. ಜಾಗ್ರತರಾಗೋಣ….
ಮಾರುತಿ ಟಿಡಿ ಬೈಂದೂರು