ಕುಂದಾಪುರ (ಆ,15): ಐಬಿಎಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ವಿಶೇಷ ತರಬೇತಿ ಶಿಬಿರ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತ್ರತ್ವದಲ್ಲಿ ಆ.14 ರಂದು ಉದ್ಘಾಟನೆಗೊಂಡಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ತರಬೇತಿ ಶಿಬಿರದ ಅಗತ್ಯತೆ ಮತ್ತು ಮಹತ್ವದ ಕುರಿತು ಮಾತನಾಡಿದರು. ಶ್ರೀಮತಿ ಭಾರತಿ ವಸಂತ್, ಮ್ಯಾನೇಜರ್, ಕೆನರಾ ಬ್ಯಾಂಕ್, ಕುಂದಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಐಬಿಎಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ತರಬೇತುದಾರರಾದ ಶ್ರೀ ದುರ್ಗಾ ಪ್ರಸಾದ್, ಶ್ರೀ ಶ್ಯಾಮ್ ಕುಮಾರ್, ಶ್ರೀ ಶರತ್, ಶ್ರೀ ಹಿಮಾಂಶು ಉಪಸ್ಥಿತರಿದ್ದರು.ಈ ತರಬೇತಿ ಶಿಬಿರವು ಆಗಸ್ಟ್ 14 ರಿಂದ 21 ರ ತನಕ ಜರುಗಲಿದೆ.
ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಸಿದರು ಮತ್ತು ಶ್ರೀ ರಜತ್ ಬಂಗೇರ ವಂದಿಸಿದರು. ವಾಣಿಜ್ಯ ಉಪನ್ಯಾಸಕಿ ಶ್ವೇತಾ ಬಿ. ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲೀಷ್ ಉಪನ್ಯಾಸಕಿ ಮೋನಿಕಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಲಕ್ಷ್ಮೀಕಾಂತ್ ಪ್ರಾರ್ಥಿಸಿದರು.