ಉಡುಪಿ (ಜು, 30): ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ರವರ ಧರ್ಮಪತ್ನಿ ಶ್ರೀಮತಿ ಸರಸ್ವತಿ (ವಯಸ್ಸು, 25)ಯವರು 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಸರಸ್ವತಿಯವರಿಗೆ ಒಂದು ಹೆಣ್ಣು ಮಗುವಿದೆ. ಪತಿ ಶಂಕರ್ ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.
ಸರಸ್ವತಿಯವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜೀವ ಉಳಿಸಿಕೊಳ್ಳಲು ಪತಿಯ ಕಿಡ್ನಿಯನ್ನು ಪತ್ನಿಗೆ ಬದಲಾಯಿಸಲು ನುರಿತ ವೈದ್ಯಾಧಿಕಾರಿಗಳು ಸುಮಾರು 7.50 ಲಕ್ಷ ಚಿಕಿತ್ಸಾ ವೆಚ್ಚ ತಗಲುತ್ತದೆ ಎಂದು ಹೇಳಿದ್ದಾರೆ. ಚಿಕಿತ್ಸಾ ವೆಚ್ಚ ಬರಿಸಲು ಕಷ್ಟಪಡುತ್ತಿರುವ ಸರಸ್ವತಿಯವರ ಪತಿಗೆ ದಿಕ್ಕು ತೋಚದಾಗಿದ್ದು, ತಾವೆಲ್ಲರೂ ದಯಮಾಡಿ ಸಹಾಯಧನ ಮಾಡಬೇಕಾಗಿ ಕಳಕಳಿಯ ವಿನಂತಿ…
ಧನ ಸಹಾಯ ಮಾಡುವವರು ಈ ಕೆಳಗೆ ತಿಳಿಸಿದ ಖಾತೆಗೆ ಹಣ ನೇರವಾಗಿ ರವಾನಿಸಬಹುದು.
ಸ್ಥಳ : ಕುಂಜಾರುಗಿರಿ
ಬ್ಯಾಂಕ್ ಖಾತೆಯ ವಿವರ:
NAME: SARASWATHI
BANK NAME: CANARA BANK
A/C NO :- 110002152050
IFSC CODE :- CNRB0010195
Contact Number : +91 97436 83032