ಮಂಬೈ (ಆ, 03) : ಕೊರೊನಾ ಲಾಕ್ದೌನ್ ನಿಂದಾಗಿ ಮುಂಬೈಯಲ್ಲಿ ಕೇಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನವಿ ಮುಂಬೈ ವೆಡ್ಡಿಂಗ್ ಅಸೋಷಿಯೇಷನ್ (ರಿ.) ಕಳೆದ ಕೆಲವು ತಿಂಗಳುಗಳಿಂದ ಬಹಳ ಶ್ರಮ ಪಡುತ್ತಿದೆ. ಹಲವಾರು ಜನಪ್ರತಿನಿಧಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕೇಟರಿಂಗ್ ಉದ್ಯಮವನ್ನು ಉಳಿಸಿ ಕೊಡಬೇಕಾಗಿ ಮನಸೇ ಮುಖ್ಯಸ್ಥ ಶ್ರೀ ರಾಜ್ ಸಾಹೇಬ್ ಠಾಕ್ರೆಯವರಿಗೆ ಮನವಿ ಪತ್ರ ನೀಡಲಾಗಿದೆ.
ಮನಸೇ ಮುಖ್ಯಸ್ಥ ಶ್ರೀ ರಾಜ್ ಸಾಹೇಬ್ ಠಾಕ್ರೆಯವರನ್ಶು ಕೃಷ್ಣ ಕುಂಜಲ್ಲಿ ಭೇಟಿಯಾಗಿ ಉದ್ಯಮದ ಸಮಸ್ಯೆಗಳನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾದ ಸಿಂಧೂರ್ ರಾಜೇಶ್ ಗೌಡ, ಕಾರ್ಯದರ್ಶಿ ಉಮೇಶ್ ದರ್ವೇಸ್, ಖಜಾಂಜಿ ಕೈಲಾಸ್ ಮುದ್ರಾಸ್, ಮಾರ್ಗದರ್ಶಕರಾದ ಗಿರೀಶ್ ರಾವ್ ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಕೇಟರಿಂಗ್ ಉದ್ಯಮದ ಸಮಸ್ಯೆಗಳನ್ನು ಆಲಿಸಿದ ರಾಜ್ ಸಾಹೇಬ್ ಆದಷ್ಟು ಬೇಗ ನಾನು ರಾಜ್ಯದ ಗ್ರಹಮಂತ್ರಿ ಶ್ರೀಯುತ ಅಜಿತ್ ದಾದ ಪವಾರ್ ರವರನ್ನು ಭೇಟಿಯಾಗಿ ಕೇಟರಿಂಗ್, ಡೆಕೋರೇಷನ್ ಉದ್ಯಮದ ಕಾನೂನು ಸಡಿಲಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ
ವರದಿ ✍️ಈಶ್ವರ ಸಿ ನಾವುಂದ