ಉಡುಪಿ (ಆ, 09) : ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಕೆಲವು ಭಾಗಗಳಿಗೆ ಉಡುಪಿ ನಗರ ಸಭೆಯ ಫುಡ್ ಆಫೀಸರ್ ಕರುಣಾಕರ್ ಮತ್ತು ಶಂಕರ್, ಬಿಲ್ ಕಲೆಕ್ಟರ್ ಮತ್ತು ನಗರ ಸಭೆ ಸದಸ್ಯರ ತಂಡ ದಿಢೀರ್ ಭೇಟಿ ಕೊಟ್ಟು ಸ್ವಚ್ಛತೆ, ಪ್ಲಾಸ್ಟಿಕ್ ಉಪಯೋಗ ಮತ್ತು ಕರೋನಾ ನಿಯಮದ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು. ನಿಯಮ ಪಾಲಿಸದೆ ಇದ್ದವರಿಗೆ ದಂಡವನ್ನು ವಿಧಿಸಿದರು.











