ಕುಂದಾಪುರ (ಆ, 09) : ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಇದರ 2021-22 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮವು ಆಗಸ್ಟ್,1 ರಂದು ಕಂದಾವರ ಆಡಿಟೋರಿಯಂ ನ ಸಂಕಲ್ಪ ಸಭಾಭವನದಲ್ಲಿ ನೆರವೇರಿತು. ಲಯನ್ಸ್ ಕ್ಲಬ್ 317c ಯ ನಿರ್ಗಮಿತ ಜಿಲ್ಲಾ ಗವರ್ನರ್ ಲಯನ್ ವಿ. ಜಿ. ಶೆಟ್ಟಿ pmjf ಇವರು ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಅಧ್ಯಕ್ಷರಾದ ಲಯನ್ ಜಯಶೀಲ ಶೆಟ್ಟಿ ಕಂದಾವರ ಅಧ್ಯಕ್ಷತೆಯನ್ನು ವಹಿಸಿದ್ದರು. ರೀಜನ್ ಚೇರ್ ಪರ್ಸನ್ ಕೆದೂರು ಸೀತಾರಾಮ ಶೆಟ್ಟಿ, ಝೋನ್ 1II ರ ಝೋನ್ ಛೇರ್ಮನ್ ಲಯನ್ ಅಶೋಕ್ ಶೆಟ್ಟಿ ಸಂಸಾಡಿ , ಎಕ್ಸ್ಟೆಂಷನ್ ಚಯರ್ ಪರ್ಸನ್ ಲಯನ್ ಅರುಣ್ ಕುಮಾರ್ ಹೆಗ್ಡೆ , ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ 2020-21 ರ ಕೋಶಾಧಿಕಾರಿ ಲಯನ್ ರಾಜೇಶ್ ಶೆಟ್ಟಿ 2021-22 ನೇ ಸಾಲಿನ ಕೋಶಾಧಿಕಾರಿ ಲಯನ್ ಅಣ್ಣಪ್ಪ ಶೆಟ್ಟಿ ಯರುಕೋಣೆ ಯವರು ಶುಭ ಹಾರೈಸಿದರು.
ಲಯನ್ಸ್ ಜಿಲ್ಲಾ ಕ್ಯಾಬಿನೇಟ್ ಸದಸ್ಯರಾದ ಲಯನ್ ಇಂಜಿನಿಯರ್ ರತ್ನಾಕರ್ ಶೆಟ್ಟಿ, ಲಯನ್ ರಾಜೀವ್ ಕೋಟ್ಯಾನ್ ಲಯನ್ ಡಾ. ಬಾಲಕೃಷ್ಣ ಶೆಟ್ಟಿ , ಲಯನ್ ದೀನಪಾಲ್ ಶೆಟ್ಟಿ, ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ ಹಾಗೂ ಜಿಲ್ಲೆಯ ವಿವಿಧ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು, ಸದಸ್ಯರು ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಎಲ್ಲಾ ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರು ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪದಗ್ರಹಣ ಸಮಾರಂಭದ ಸೇವಾ ಕಾರ್ಯಕ್ರಮದ ಅಂಗವಾಗಿ ಶಾಶ್ವತ ಕಾಲು ನ್ಯೂನತೆಗೊಳಗಾದ ಬಳ್ಕೂರು ರಾಮ ಮೊಗವೀರ ಹಾಗೂ ಹರ್ಕೂರು ಸ್ವಪ್ನ ಸೂರಪ್ಪಶೆಟ್ಟಿ ಯವರಿಗೆ ವೈದ್ಯಕೀಯ ಸಹಾಯ ಧನವನ್ನು , ಬೈಂದೂರು ತಾಲೂಕಿನ ಕೆರಾಡಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ವಿದ್ಯಾಬ್ಯಾಸ ಮಾಡುತ್ತಿರುವ ಶ್ರೀಮತಿ ಜ್ಯೋತಿ ಅವರ ಮಕ್ಕಳಿಗೇ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸೋಲಾರ್ ದೀಪವನ್ನು ಹಾಗೂ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅರ್ ವಿ ಕಾಲೇಜ್ ನ ಆರ್ಕಿಟೆಕ್ ವಿದ್ಯಾರ್ಥಿ ಮೃದುಲ್ ಶೆಟ್ಟಿ , ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಿರಾಗ್ ಶೆಟ್ಟಿಯವರಿಗೆ ಗೌರವ ಧನ ನೀಡಿ ಸನ್ಮಾನಿಲಾಯಿತು.
ಲಯನ್ ಮಹೇಂದ್ರ ಪ್ರಾರ್ಥಿಸಿದರು. 2020-21 ನೇ ಸಾಲಿನ ಅಧ್ಯಕ್ಷರಾದ ಲಯನ್ ರತ್ನಾಕರ ಶೆಟ್ಟಿ ಕಂದಾವರ ಸ್ವಾಗತಿಸಿದರು. ಲಯನ್ ಸುಕುಮಾರ ಶೆಟ್ಟಿ ಹೇರಿಕುದ್ರು, ಲಯನ್ ಕೋಡ್ ಆಫ್ ಎಥಿಕ್ಸ್ ಹಾಗೂ ಲಯನ್ ಗಣೇಶ್ ಬೈಂದೂರು ಫ್ಲಾಗ್ ಸೆಲ್ಯುಟೇಷನ್ ಮಾಡಿದರು. ಲಯನ್ ವೆಂಕಟರಮಣ ನಾಯಕ್ ಪದಗ್ರಹಣ ಅಧಿಕಾರಿಯವರನ್ನು ಹಾಗೂ ಲಯನ್ ವಸಂತ್ ರಾಜ್ ಶೆಟ್ಟಿ ಅಧ್ಯಕ್ಷರನ್ನು ಪರಿಚಯಿಸಿದರು.
ನೂತನ ಸದಸ್ಯರಾಗಿ ಸೇರ್ಪಡೆಯಾದ ಉದಯ್ ನಾಯ್ಕ ಹೈಕಾಡಿ, ಉದಯ ಮಡಿವಾಳ ಸಿದ್ದಾಪುರ , ಹಾಗೂ ಶಶಿಧರ ಶೆಟ್ಟಿ ಕೋಟೇಶ್ವರರವರ ಪರಿಚಯವನ್ನು ಲ. ಅಂಪಾರು ನಿತ್ಯಾನಂದ ಶೆಟ್ಟಿ ನೆರವೇರಿಸಿದರು.
ಪ್ರಧಾನ ಕಾರ್ಯದರ್ಶಿ ಲಯನ್ ಗಿರೀಶ್ ಮೇಸ್ತ ವಂದಿಸಿದರು. ಶ್ರೀಮತಿ ಶೈಲಜಾ ವಸಂತ್ ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.