ಕೊಲ್ಲೂರು (ಆ, 12) : ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ವಾಟೇಗುಂಡಿಯಲ್ಲಿ ನೂತನವಾಗಿ ನವಚೈತನ್ಯ ಜೆ.ಎಲ್.ಜಿ. ತಂಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ರಾಮ ಎನ್. ಸಂಘದ ಬಗ್ಗೆ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಒಕ್ಕೂಟದ ಪದಾಧಿಕಾರಿ ಮಂಜುನಾಥ್ ನಾಯ್ಕ್ ರವರ ಸಮ್ಮುಖದಲ್ಲಿ ನೂತನ ಸಂಘವನ್ನು ಉದ್ಘಾಟನೆ ಮಾಡಲಾಯಿತು. ಸಭೆಯಲ್ಲಿ ನವಚೈತನ್ಯ ಸಂಘದ ಸದಸ್ಯರು ಉಪಸ್ಥಿತರಿದ್ದು, ಸಂಘದ ಉದ್ಘಾಟನೆಯ ಸವಿ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.













