ಕುಂದಾಪುರ (ಆ, 15): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕದಲ್ಲಿ ಆಯೋಜಿಸಿದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀ ಬಿ. ಎನ್. ಶೆಟ್ಟಿ, ನೆರವೇರಿಸಿದರು. ಶಿಕ್ಷಣದಿಂದ ರಾಷ್ಟ್ರಪ್ರೇಮವನ್ನು ಬೆಳೆಸುವ ಮೂಲಕ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಗವರ್ನಿಗ್ ಕೌನ್ಸಿಲ್ ಸದಸ್ಯರಾದ ಶ್ರೀ ಎನ್. ನಾರಾಯಣ್ ನಾಯಕ್, ಪ್ರಾಂಶುಪಾಲರಾದ ಪ್ರೊ|ಕೆ. ಉಮೇಶ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ , ಎನ್ಸಿಸಿ ಕೇರ್ ಟೇಕರ್ ಶ್ರೀ ಶರತ್ ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿಗಳು, ಎನ್ಸಿಸಿ, ಎನ್ಎಸ್ಎಸ್, ರೇಂಜರ್ಸ್ ಮತ್ತು ರೋವರ್ಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಪ್ರಾಧ್ಯಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.ಎನ್ಸಿಸಿ ಕ್ಯಾಡೆಟ್ ಸುಪ್ರೀತ್ ಕಮಾಂಡ್ ನೀಡಿ, ಪ್ರಖ್ಯಾತ ಮತ್ತು ಪ್ರವೀಣ್, ವಘಾ ಬಾರ್ಡರ್ ಪರೇಡ್ ಪ್ರಾತ್ಯಕ್ಷತೆ ತೋರಿಸಿದರು.