ಹೇ ಭಾರತಾಂಬೆ, ನಾ ನಿನ್ನ ಮಡಿಲಲ್ಲಿ ನಲಿದಾಡುವ ಕಂದ
ನೂರು ಜನ್ಮ ತಾಳಿದರು ತಿರಿಸಲಾರೆ ನಾ ನಿನ್ನ ಋಣಾನುಬಂಧ.
ನಿನ್ನ ಮಡಿಲೇ ಗಂಧದ ಗುಡಿ ನನಗೆ
ಹಚ್ಚ ಹಸಿರಿನ ಗಿರಿವನಗಳೆ ನೀನಿತ್ತ ಉಸಿರು ನನಗೆ
ನೀ ಸಿರಿ ದೇವತೆ, ನೀ ಜ್ಞಾನಮಯಿ
ನೀ ಶಕ್ತಿ ದೇವತೆ, ನೀ ಕರುಣಾಮಯಿ
ನೀ ನಮ್ಮ ಬಾಳ ಜ್ಯೋತಿ
ನಿನ್ನಿಂದಲೇ ಜೇವನದ ಕಾಂತಿ
ಸದಾ ನಮಿಪೆ ನಿನ್ನ ಚರ್ಣಗಳಿಗೆ ಹೇ ಭಾರತಾಂಬೆ.
ಜೈ ಭಾರತಾಂಬೆ, ಜೈ ಭಾರತಾಂಬೆ.
ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ.,
ಸಹಾಯಕ ಪ್ರಾಧ್ಯಾಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು ೫೬೦೦೨೯