ಕುಂದಾಪುರ (ಆ, 16) : ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಆಗಸ್ಟ್15 ರಂದು ಯುವ ತಿರಂಗಾ ಯಾತ್ರಾ ಸೈಕಲ್ ಜಾಥಾ ನಡೆಯಿತು. ಕುಂದಾಪುರ ಶಾಸ್ತ್ರೀ ವೃತ್ತದಿಂದ ಹೊರಟು ಹೆದ್ದಾರಿ ಮಾರ್ಗವಾಗಿ ಕೋಟೇಶ್ವರ ಪೇಟೆಯ ಮೂಲಕ ತಿರುವು ಪಡೆದು ಕುಂದಾಪುರ ಪೇಟೆಯಯತ್ತ ಸಾಗಿದ ಜಾಥಾ ನಂತರ ಶಾಸ್ತ್ರೀ ವೃತ್ತದಲ್ಲಿ ಪೂರ್ಣಗೊಳಿಸಲಾಯಿತು.
ಸೈಕಲ್ ಜಾಥಕ್ಕೆ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಚಾಲನೆ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಬಂಗೇರ, ಸುನೀಲ ಖಾರ್ವಿ, ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸುಶಾಂತ್ ಅಚ್ಲಾಡಿ, ಸುಕೇಶ್ ಭಂಡಾರ್ಕಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ ಪುರಸಭೆ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಭಾಕರ್, ಶೇಖರ್, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.