ಕೋಟೇಶ್ವರ( ಸೆ.13): ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊರವಡಿ ಇಲ್ಲಿನ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕೋಟೇಶ್ವರ ಇದರ ನೇತ್ರತ್ವದಲ್ಲಿ “ದೀಆರ್ವಿ” ಚಿಟ್ಸ್ ಪ್ರೈ, ಲಿ. ಮಂಗಳೂರು ಇವರ ಸಹಕಾರದಿಂದ ಉಚಿತ ಕ್ರೀಡಾ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮವು ಸೆಪ್ಟೆಂಬರ್,12 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ಇಲ್ಲಿ ನೆರವೇರಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೀಪಿಕಾ ಆರ್ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕೋಟೇಶ್ವರ ರೋಟರಿ ಕ್ಲಬ್’ನ ಅಧ್ಯಕ್ಷರಾದ Rtn ಸತೀಶ್ ಎಂ. ನಾಯ್ಕ್ ವಿಧ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಣೆ ಮಾಡಿ ಶುಭ ಹಾರೈಸಿದರು. ಕೋಟೇಶ್ವರ ರೋಟರಿ ಕ್ಲಬ್’ನ ಸದಸ್ಯರಾದ Rtn ರವಿರಾಜ್ ಕುಂಭಾಶಿ, Rtn ರವೀಶ್ ಶ್ರೀಯಾನ್, Rtn ಸುಧಾಕರ್ ಕಾಂಚನ್, Rtn ಚಂಸ್ರಹಾಸ ಗಾಣಿಗ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ರಾವ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಮಾಲತಿ ಶೆಟ್ಟಿ ಸ್ವಾಗತಿಸಿ ನಿರ್ವಹಿಸಿದರು.