ಸತ್ಯವೆಂದು ನಂಬಿದೆಲ್ಲಾ
ಸುಳ್ಳಿನ ಸುಳಿಯಾಗಿ
ಬದುಕಿಗೂ ಉರುಳಾಗಿ
ನಮ್ಮನ್ನೇ ಕೆಡವುವ ಕೆಡ್ಡವಾಗಿ
ಜೀವವೇ ನಶಿಸಲೂ ಬಹುದು
ಬದುಕೇ ಹಾಳಾಗಬಹುದು..
ಮರುಳಾಗದಿರು ನೀ
ಪ್ರೀತಿಯ ಮಾತಿಗೆ
ನಯವಂಚಕರ ಸರಳ
ಸುಂದರ ನಡುವಳಿಕೆಗೆ..
ಮೋಡಿಯ ಮಾತಿನಿಂದಲೇ
ಹೆಣೆಯುವರು ಬಲೆಯ
ಸ್ನೇಹದ ಸೊಗಡಲಿ
ಪ್ರೀತಿಯ ಮಾಡಿ ನಂಬಿಸಿ
ವಂಚಿಸಿ ದೂರಾಗುವರು
ಪ್ರೀತಿಗೆ ಸ್ನೇಹದ
ಮುಖವಾಡವ ಹೊದಿಸಿ
ತನ್ನನ್ನೇ ವಂಚಿಸಿಕೊಳ್ಳುವರು..
ಒಂದೇ ಬದುಕಿಗೆ
ಹಲವು ಬಣ್ಣವು
ಅನೇಕ ಮುಖಗಳು ತೋರುವುವು
ಸತ್ಯ ಮಿಥ್ಯದ ನಡುವಿನ
ಅಂತರ ತಿಳಿಯದೆ
ಬದುಕೇ ಚಿಂತೆಯ ಗೂಡಾಗುವುದು..
ಅಮಿತಾ ಅಶೋಕ್ ಪ್ರಸಾದ್