Views: 347
ಸತ್ಯವೆಂದು ನಂಬಿದೆಲ್ಲಾಸುಳ್ಳಿನ ಸುಳಿಯಾಗಿಬದುಕಿಗೂ ಉರುಳಾಗಿನಮ್ಮನ್ನೇ ಕೆಡವುವ ಕೆಡ್ಡವಾಗಿಜೀವವೇ ನಶಿಸಲೂ ಬಹುದುಬದುಕೇ ಹಾಳಾಗಬಹುದು.. ಮರುಳಾಗದಿರು ನೀಪ್ರೀತಿಯ ಮಾತಿಗೆನಯವಂಚಕರ ಸರಳಸುಂದರ ನಡುವಳಿಕೆಗೆ..ಮೋಡಿಯ ಮಾತಿನಿಂದಲೇಹೆಣೆಯುವರು ಬಲೆಯ ಸ್ನೇಹದ ಸೊಗಡಲಿಪ್ರೀತಿಯ ಮಾಡಿ ನಂಬಿಸಿವಂಚಿಸಿ ದೂರಾಗುವರುಪ್ರೀತಿಗೆ ಸ್ನೇಹದಮುಖವಾಡವ ಹೊದಿಸಿತನ್ನನ್ನೇ ವಂಚಿಸಿಕೊಳ್ಳುವರು.. ಒಂದೇ ಬದುಕಿಗೆಹಲವು ಬಣ್ಣವುಅನೇಕ ಮುಖಗಳು ತೋರುವುವುಸತ್ಯ ಮಿಥ್ಯದ ನಡುವಿನಅಂತರ ತಿಳಿಯದೆಬದುಕೇ ಚಿಂತೆಯ ಗೂಡಾಗುವುದು.. ಅಮಿತಾ ಅಶೋಕ್ ಪ್ರಸಾದ್