ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಬಂದ ಕರೋನ ಮಹಾಮಾರಿಯ ಆರಂಭದ ಸಮಯ. ಕರೋನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಕಂಡುಬಂದರೂ ಸಹ ಹಲವರ ಬದುಕಿನ ದಿಕ್ಕು ತಪ್ಪಿದಂತೂ ಸುಳ್ಳಲ್ಲ.
ಸರಿಸುಮಾರು ನಾಲ್ಕು ತಿಂಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದೆ. 30 ವರ್ಷದಿಂದ ಮುಂಬೈಯಲ್ಲಿ ವಾಸವಾಗಿದ್ದ ನನಗೆ ಬಹುತೇಕ ಎಲ್ಲಾ ಕ್ಯಾಟ್ ರಿಂಗ್ ವಲಯದ ಒಡನಾಟವಿದೆ. ಸಣ್ಣ ಮಟ್ಟದಲ್ಲಿ ನನ್ನ ಒಡೆತನದಲ್ಲಿ ಆಕಾಶ್ ಹೆಲ್ತ್ ಫುಡ್ ಪಾಸ್ತಾ ಅಂಡ್ ಎಕ್ಸೋಟಿಕ್ ಸಲಾಡ್ ಎನ್ನುವ ಆಹಾರಕ್ಕೆ ಸಂಬಂಧಸಿದ ಒಂದು ಸಣ್ಣ ಕಾಂಟಿನೆಂಟಲ್ ಇಂಗ್ಲಿಷ್ ಫುಡ್ ಪೂರೈಸುವ ಆಹಾರ ಸಂಸ್ಥೆಯನ್ನು ಮಾಡಿಕೊಂಡಿದ್ದರೂ ಕೂಡ ನನಗೆ ಕಾರ್ಪೊರೇಟ್ ಕ್ಯಾಟರಿಂಗ್ ಆಶ್ರಯದಲ್ಲಿ 7/8ಫುಡ್ ಕೌಂಟರ್ , 10 ಜನ ಕೆಲಸಗಾರರೊಂದಿಗೆ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದೆ.
ಹಲವಾರು ಪ್ರಸಿದ್ಧ ಕಾರ್ಪೊರೇಟ್ ಕ್ಯಾಟ್ ರಿಂಗ್, ಮತ್ತು ಕಿಚನ್ ರವರ ಸಹಭಾಗಿತ್ವದಲ್ಲಿ ಗೌರವ ಮತ್ತು ಪ್ರೀತಿಯಿಂದ ಕೆಲಸ ಮಾಡಿದ ಸಂತ್ರಪ್ತಿ ನನಗಿದೆ. ನಾವು ಪೂರೈಸುವ ಶುಚಿ-ರುಚಿ ಆಹಾರದಿಂದಾಗಿ,ಅವಕಾಶ ಕೊಟ್ಟ ಕೆಲವು ಪ್ರಸಿದ್ದ ಕ್ಯಾಟರಿಂಗ್ ಮಾಲೀಕರ “ಪ್ರೊಫೈಲ್” ಗೆ ಒಳ್ಳೆ ಹೆಸರು ಬಂದಿರುವುದಂತೂ ಸತ್ಯ.
“ಆಕಾಶ್” ಹೆಲ್ತ್ ಫುಡ್ & ಸಲಾಡ್ ಪಾಸ್ತಾ ಕ್ಯಾಟರಿಂಗ್ ಆರಂಭಿಸಲು ಮೊದಲು ಪ್ರತಿಷ್ಠಿತ L&T ಕಂಪನಿ ಒಳಗಡೆ ನನಗೆ ಅವಕಾಶ ಮಾಡಿಕೊಟ್ಟ “ಮೇರಿಟ್” ಹಾಸ್ಪಿಟಲಿಟಿ & ಕ್ಯಾಟರಿಂಗ್ ಸರ್ವಿಸ್ ಬೆಳ್ಳಾಡಿ ಅಶೋಕ್ ಶೆಟ್ಟಿಯವರನ್ನು ಇಲ್ಲಿ ಗೌರವಪೂರ್ವಕವಾಗಿ ನೆನೆದು ಕೊಳ್ಳುತ್ತೇನೆ. ಜೊತೆಗೆ “ಡೀಟೈಕೋ” ಹೆಲ್ತ್ ಫುಡ್ ಅಂಡ್ ಹಾಸ್ಪಿಟಲಿಟಿ ಸರ್ವಿಸ್ ಇದರ ಮಾಲೀಕರಾದ ದಯಾನಂದ್ ಶ್ರೀಯಾನ್ ಮತ್ತು ಕುಶಾಲ್ ಶೆಟ್ಟಿಯವರು ನನಗೆ ಮುಂಬೈ ಕ್ಯಾಟರಿಂಗ್ ರಂಗದಲ್ಲಿ ನೆರಳಾಗಿ ನನ್ನ ಬೆನ್ನ ಹಿಂದೆ ಇದ್ದು ಸಹಾಯ ಮಾಡಿದವರು. ನಾನು ಅವರ ನೆರಳಲ್ಲಿ ಬೆಳೆದವನು ಎನ್ನುವ ಅಭಿಮಾನ ಇದೆ. ಹಾಗೆಯೇ “ಕುಬೇರ” ಹಾಸ್ಪಿಟಾಲಿಟಿ & ಫುಡ್ ಸರ್ವಿಸ್ ಕ್ಯಾಟರಿಂಗ್ ಮಾಲೀಕರಾದ ಮಂಜು ನಾಯ್ಕ್ ರವರು ಕೆಲವು ಕ್ಯಾಟರಿಂಗ್ ರಂಗದವರಿಗೆ ನನ್ನನ್ನು ಪರಿಚಯಿಸಿ ಅವಕಾಶ ಕೊಡಿಸಿದವರು. ಅವರ ಪ್ರೀತಿ ಮತ್ತು ಅಕ್ಕರೆಯಲ್ಲಿ ಬೆಳೆಯುತ್ತಲೇ ಹೋದವನು ನಾನು. ಮುಂಬೈಯ ಕ್ಯಾಟರಿಂಗ್ ರಂಗದ ಪೂರ್ಣಚಂದ್ರನೆಂದೇ ಕರೆಯಲ್ಪಡುವ “ಸಾಯಿಸಿದ್ದಿ” ಮಂಜುನಾಥ್ ಶೆಟ್ಟಿ ಬೆಳ್ಳಾಡಿಯವರು ಸದಾ ಏನಾದರೂ ಮಾಡಿ ಎಂದು ನನ್ನನ್ನು ಹುರಿದುಂಬಿಸಿದವರು.
ಕರೋನಾ ಲಾಕ್ಡೌನ್ ನಿಂದಾಗಿ ಮುಂಬೈಯಿಂದ ಬಂದು ಕೆಲಸ ಕಾರ್ಯ ಇಲ್ಲದೆ ಇದ್ದಾಗ ಎಲ್ಲಿಯೂ ಯಾರು ಕೆಲಸಕ್ಕೆ ಕರೆಯುವರೇ ಇಲ್ಲದೆ ಇದ್ದಾಗ ನನಗೆ ಒಂದು ಕರೆ ಬರುತ್ತೆ. ಶ್ರೀ ಗೋವಿಂದ ಬಾಬು ಪೂಜಾರಿ ಹೆಸರಿನ ಕರುಣಾಮಯಿ ಮನುಷ್ಯನಿಗೆ ನನ್ನ ಪೂರ್ವಪರ ಏನು ಹೆಚ್ಚು ಗೊತ್ತಿಲ್ಲ. ನಾನು “ಆಕಾಶ್ ಹೆಲ್ತ್ ಫುಡ್ ” ಆರಂಭಿಸಿದ ಸಮಯದಲ್ಲಿ ನನ್ನ ಪ್ರೊಫೈಲ್ ಹಿಡಿದು ಶ್ರೀ ಗೋವಿಂದ ಬಾಬು ಪೂಜಾರಿಯವರನ್ನು ಭೇಟಿಮಾಡಿದ್ದೆ. ಅವರು ಆ ದಿನದಲ್ಲಿ ಅವಕಾಶ ಕೂಡ ಕೊಟ್ಟಿದ್ದರು. ಆದರೆ ಸೈಟ್ ತುಂಬಾ ಚಿಕ್ಕದಿದ್ದುರಿಂದ ಅಲ್ಲಿರುವ ಆಫೀಸ್ ಎಂಪ್ಲೋಯೆಸ್ ಇತಿಮಿತಿಯಲ್ಲಿ ನನ್ನ ಕಾನ್ಸೆಪ್ಟ್ ಪರಿಚಯಿಸುವ ಅವಕಾಶ ಕಡಿಮೆ ಇದ್ದಿತ್ತು. ಹಾಗಾಗಿ ಮುಂಬೈಯಲ್ಲಿ ನನ್ನ ಹೆಲ್ತ್ ಕಾನ್ಸೆಪ್ಟ್ “ಶೆಪ್ ಟಾಕ್” ಹಾಸ್ಪಿಟಲಿಟಿ ಕ್ಯಾಟರಿಂಗ್ ಸರ್ವಿಸ್ ಅಡಿಯಲ್ಲಿ ನನಗೆ ಕೆಲಸ ನಿರ್ವಹಿಸಲು ಸಾಧ್ಯವಾಗಲಿಲ್ಲ.
ಕೊರೋನ ಸಂಕಷ್ಟದ ಸಮಯದಲ್ಲಿ ಅವರನ್ನು ಭೇಟಿ ಮಾಡಿದಾಗ, ಮೊದಲು ಕೇಳಿದ್ದು “ಕ್ಯಾಂಟೀನ್ ನೆಡೆಸುತ್ತಿರಾ? ಅಥವಾ ಕೆಲಸ ಮಾಡುತ್ತಿರಾ? ಎನ್ನುವ ಆಯ್ಕೆ ಇಟ್ಟರೂ ಆ ಕೊರೋನ ಸಮಯದಲ್ಲಿ ಕೆಲಸ ಸಿಕ್ಕರೆ ಸಾಕು ಅನ್ನೋ ಪರಿಸ್ಥಿತಿಯಲ್ಲಿ ಅದೆಷ್ಟೋ ಜನರು ಇದ್ದರೂ, ನನಗೆ ಇಲ್ಲಿ ಕರುಣಾಮಯಿ ಶ್ರೀ ಗೋವಿಂದ ಬಾಬು ಪುಜಾರಿಯವರು” ಶೆಫ್ ಟಾಕ್” ಸಂಸ್ಥೆ ಆಯ್ಕೆಯ ಅವಕಾಶ ಇತ್ತು ನೋಡಿ. ಆದರೆ ನನ್ನ ಪರಿಸ್ಥಿತಿಯ ವಿಷಮತೆ, ಕ್ಷಮತೆ ಅರಿತ ನಾನು ಕೆಲಸದ ಆಯ್ಕೆ ಮಾಡಿ ಕೊಂಡು ಯಾವುದೇ ರೀತಿಯ ಇಂಟರ್ವ್ಯೂ ಪ್ರಶ್ನೆ ಏನು ಇಲ್ಲದೆ “ಶೆಫ್ ಟಾಕ್” ಎಂಬ ಪ್ರಸಿದ್ದ ಸಂಸ್ಥೆಯಲ್ಲಿ ನಾನು ಕೆಲಸಕ್ಕೆ ಸೇರಿದೆ.ಇಂದಿಗೂ ಶೆಫ್ ಟಾಕ್ ಸಂಸ್ಥೆಯಲ್ಲಿ ಕೆಲಸ ಮಾಡುವ “ಶೆಫ್ “(ಅಡುಗೆ ಭಟ್ರಿಗೆ )ರನ್ನು ಹಾಗೂ ಎಲ್ಲಾ ಕಾರ್ಮಿಕರನ್ನು ಮಮತೆ ಮತ್ತು ಆದರದಿಂದ ನೋಡಿಕೊಳ್ಳುವುದು ಶ್ರೀ ಗೋವಿಂದ ಬಾಬು ಪೂಜಾರಿ ಯವರ ಹ್ರದಯ ಶ್ರೀಮಂತಿಕೆ ಹಾಗೂ ದೊಡ್ಡ ಗುಣ. ನಾನು ಇವರನ್ನು “ಗುಣವಂತ ಉದ್ಯಮಿ”ಎಂದು ಸಂಬೋಧಿಸಿ ಬರೆದಿರುವುದು ಈ ಗುಣಧರ್ಮಗಳಿಗಾಗಿಯೇ. ಇವರನ್ನು ನಾನು ಗೌರವಿಸುದಕ್ಕೆ ಹಲವಾರು ಕಾರಣಗಳಿವೆ.
ಕಾರ್ಮಿಕರನ್ನು ಪ್ರೀತಿಯಿಂದ ಕಾಣುವುದು ಶ್ರೀ ಗೋವಿಂದ ಬಾಬು ಪೂಜಾರಿಯವರ ಬಹುದೊಡ್ಡ ಗುಣ. ವಿಶೇಷತೆ ಏನೆಂದರೆ ಒಬ್ಬ ವ್ಯಕ್ತಿಯ ಮೊದಲ ಭೇಟಿಯಲ್ಲೇ ಆತನ ಗುಣ- ಅವಗುಣ ಅಳೆಯುವ ಎಲ್ಲಾ ಸಮರ್ಥ್ಯ ಅವರ ಒಂದು ಕಣ್ಣೋಟದಲ್ಲೇ ಇದೆ!. ಬಹುಶ ಕ್ಯಾಟರಿಂಗ್ ರಂಗ ಹಲವಾರು ವರ್ಷದಿಂದ ಇದ್ದ ಕಾರಣವೂ ಆಗಿರಬಹುದು. ಅವರ ಸಮಾಜ ಮುಖಿ ಕಾರ್ಯಗಳು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ .ಪುನಃ ಪುನಃ ಅದನ್ನು ಇಲ್ಲಿ ಉಲ್ಲೇಖಿಸುವುದಿಲ್ಲ. ಮುಖ್ಯವಾದವನ್ನು ಇಲ್ಲಿ ಬರೆಯಬೇಕಾಗಿದ್ದುದು ಅವರು ಸಂಸ್ಥೆಯ ಕಾರ್ಮಿಕರ ಮೇಲಿನ ಪ್ರೀತಿ ಮತ್ತು ಮಮತೆ.ಶ್ರೀಯುತರ ಸಂಸ್ಥೆಯಲ್ಲಿ ಒಂದನೇ ತರಗತಿ ಕಲಿಯದಿದ್ದವರಿಗೂ ಅವರು ಮಾಡಬಹುದಾದ ಕೆಲಸ ಕೊಟ್ಟ ಪುರಾವೆಗಳಿವೆ. ಅವಿದ್ಯಾವಂತ ಯುವಕರಿಗೂ ಅವರ ಸಂಸ್ಥೆಯಲ್ಲಿ ಕೆಲಸಗಳಿವೆ.
ಡಿಸೆಂಬರ್ 31ರಂದು ಬೆಂಗಳೂರಿನಲ್ಲಿ ಕಾರ್ಮಿಕರಿಗಾಗಿ ನಡೆಯುವ ಔತಣಕೂಟದಲ್ಲಿ ಅದೆಷ್ಟೋ ಕಾರ್ಮಿಕರು ಗೌರವದಿಂದ ಇವರ ಕಾಲಿಗೆ ನಮಸ್ಕರಿಸಿದ್ದನ್ನು ನೋಡಿದ್ದೇನೆ . ನನಗೆ ಬಹುತೇಕ ಕ್ಯಾಂಟರಿಂಗ್ ರಂಗದ ಎಲ್ಲಾ ಮಾಲೀಕರ ಒಡನಾಟ ಇದ್ದರೂ, ಕೊರೋನ ಸಮಯದಲ್ಲಿ ಕೆಲಸವಿಲ್ಲದೇ ಖಾಲಿ ಕುಳಿತಾಗ” Dietico” ಹೆಲ್ತ್ ಫುಡ್ ನ ದಯಾನಂದ್ ಶ್ರೀಯಾನ್ ಮತ್ತು 7ಡೇ 7ಕುಕ್ ಮಾಲೀಕರು ಮತ್ತು ನನ್ನ ಹಿತೈಷಿಯಾದ ಸಿಂಧೂರ್ ರಾಜೇಶ್ ಗೌಡ, ರನ್ನು ಹೊರತು ಪಡಿಸಿ ಕರೆ ಕೂಡ ಮಾಡಿದವರು ಯಾರು ಇಲ್ಲ.
ಆಶ್ರಯದಾತ “ಗೋವಿಂದ ಬಾಬು ಪೂಜಾರಿ” ಕರೋನ 2ನೇ ಅಲೆಯ ಸಂದರ್ಭದಲ್ಲೂ ಕೂಡ ನನಗೆ “ಶೆಫ್ ಟಾಕ್” ಆಡಳಿತದಲ್ಲಿರುವ ಧಾರವಾಡದಲ್ಲಿನ ಕಾಲೇಜಿನ ಮೆಸ್ ಒಂದರಲ್ಲಿ ಇನ್ ಚಾರ್ಜ್ ಕಮ್” ಕುಕ್” ಆಗಿ ಕೆಲಸ ನಿರ್ವಹಿಸಲೂ ಹೇಳಿದ ಸಮಯದ ನಡುವೆಯೂ ಹಾಗೂ ಅವರ ಕೆಲಸದ ಒತ್ತಡದ ನಡುವೆಯೂ ಕೂಡ ನನಗೆ ಕರೆ ಮಾಡಿ ಧೈರ್ಯ ತುಂಬಿದವರು. ಕೋವಿಡ್ ನಿಂದ ನೀವು ನಿಮ್ಮ ಪರಿವಾರ ಜಾಗ್ರತೆಯಲ್ಲಿ ಇರಿ ಅಂತ ಹೇಳುವ ಒಬ್ಬ ಮನೆಯ ಹಿರಿಯಣ್ಣ ಗೋವಿಂದ ಬಾಬು ಪೂಜಾರಿಯವರು.
ನಾವುಂದ ದಲ್ಲಿ ಫುಡ್ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿಯೂ ಕೂಡ ನಾನು ಅವರ ಸಂಸ್ಥೆಯ ಒರ್ವ ಕಾರ್ಮಿಕನಾದರೂ, ನನ್ನ ಉಪಸ್ಥಿತಿ ಬಯಸಿದ್ದರು. ಇಂತಹ ಕಾರಣಗಳಿಂದ ಅವರನ್ನು ಕಲಿಯುಗದ ಕರ್ಣ ಅಂತ ಕರೆಯಲು ಬಹಳ ಆನಂದವಾಗುತ್ತೆ, ಜೊತೆಗೆ ಇಂತಹ ಕರುಣಾಮೂರ್ತಿಯ ಸಂಸ್ಥೆಯ ನೌಕರ ಅನ್ನುವುದು ನನಗೊಂದು ಹೆಮ್ಮೆ.
ಈಶ್ವರ್ ಸಿ ನಾವುಂದ
*ಚಿಂತಕ ಮತ್ತು ಬರಹಗಾರರು*