ಕುಂದಾಪುರ (ಜು,27): ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ಸ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅತೀ ಅಗತ್ಯವಾದ ವ್ಹೀಲ್ ಚೇರ್ನ್ನು ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ಸ್ ಇದರ ಅಧ್ಯಕ್ಷರಾದ ಶ್ರೀ ದಿನೇಶ ಹೆಗ್ಡೆಯವರು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ ಜಿ ಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಈ ಕೊಡುಗೆ ಪ್ರಾಯೋಜಕರಾದ ಲಯನ್ ಆರ್ಕಿಟೆಕ್ಟ್ ಇಕ್ಬಾಲ್ ಅಧ್ಯಕ್ಷರು ಇಂಜಿನೀಯರ್ಸ್ ì ಅಸೋಸಿಯೇಶನ್ ಹಾಗೂ ಲಯನ್ ಇಂಜಿನೀಯರ್ ರವೀಂದ್ರ ಕಾವೇರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ ಚಂದ್ರಶೇಖರ, ಉಪನ್ಯಾಸಕ ಕಾರ್ಯದರ್ಶಿ ಶ್ರೀ ಉದಯ ಶೆಟ್ಟಿ ಕಾಳಾವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಲಯನ್ಸ್ ಕ್ಲಬ್ ಕುಂದಾಪುರ ಇಂಜಿನೀಯರ್ ರವರಿಗೆ ಕೃತಜ್ಞತೆ ಸಲ್ಲಿಸಿದರು.