ಕೋಟೇಶ್ವರ(ಸೆ.6): ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಕೋಟೇಶ್ವರ ಘಟಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರದ ಸಹಭಾಗಿತ್ವದಲ್ಲಿ ಸೆಪ್ಟೆಂಬರ್,4 ರಂದು ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಉಚಿತ ಕೊರೋನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.217 ಡೋಸ್ ಲಸಿಕೆ ಹಾಕುವ ಮೂಲಕ ಅಭಿಯಾನ ಯಶಸ್ವಿಯಾಯಿತು.
ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ಡಾ. ಜಿ. ಶಂಕರ್ ರವರು ಕರೋನ ಸಮಯದಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಸ್ಪಂದಿಸಿದ ರೀತಿ ಮತ್ತು ಕೋಟೇಶ್ವರ ಸಂಘಟನೆಯ ಘಟಕದ ಸದಸ್ಯರು ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದನ್ನು ಕಾರ್ಯಕ್ರಮ ಉದ್ಗಾಟಿಸಿದ ಜಿಲ್ಲಾ ಆರೊಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪರು ಸ್ಮರಿಸಿ ಕೊಂಡರು. ಕೋವಿಡ್ ವ್ಯಾಕ್ಸಿನ್ ನೀಡುವಲ್ಲಿ ಈ ಸಂಘಟನೆಯ ಕಾಳಜಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಕೋವಿಡ್ ವ್ಯಾಕ್ಸಿನ್ ನೀಡುವಲ್ಲಿ ಕೋಟೇಶ್ವರ ಭಾಗದಲ್ಲಿ ಶೃಮಿಸುತ್ತಿರುವ ಒಟ್ಟು 35 ಜನ ಆಶಾಕಾರ್ಯಕರ್ತರು ಹಾಗೂ ಸ್ವಯಂ ಸೇವಕರಿಗೆ ಸ್ಪೂರ್ತಿ ತುಂಬುವ ಪುಸ್ತಕ ಗಳನ್ನು ನೀಡಿ ಅವರ ಸೇವೆಗೆ ಕೃತಜ್ನತೆ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷರಾದ ಸುನಿಲ್ ಜಿ. ನಾಯ್ಕ್ ವಹಿಸಿದ್ದರು, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ತಾಲೂಕು ಪಂಚಾಯಿತಿ ಸದಸ್ಯೆ ರೂಪಾ ಪೈ ,ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ್ವರಿ, ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ, ಮತ್ತು ಮೊಗವೀರ ಯುವ ಸಂಘಟನೆ ಸ್ಥಾಪಕಾಧ್ಯಕ್ಷರಾದ ಸತೀಶ್ ಎಂ ನಾಯ್ಕ್, ಗೌರವಾಧ್ಯಕ್ಷರಾದ ರಾಜೀವ್ ಸೌರಭ, ಪೂರ್ವಾಧ್ಯಕ್ಷರಾದ ರವೀಶ್ ಎಸ್ ಕೊರವಡಿ, ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷೆಯಾದ ಶಾರದ ಮೂಡುಗೋಪಾಡಿ, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಕೋಶಾಧಿಕಾರಿ ಪ್ರದೀಪ್ ಮೊಗವೀರ, ಗೌರವ ಸಲಹೆಗಾರರಾದ ಜಗದೀಶ್ ಮೊಗವೀರ ಮಾರ್ಕೋಡು, ರಾಮ ನಾಯ್ಕ್ ಬೀಜಾಡಿ, ಸುರೇಶ್ ಶಾನಾಡಿ ಮತ್ತು ಸಂಘದ ಗೌರವಾನ್ವಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.