ಕುಂದಾಪುರ(ಸೆ,27): ರಾಜ್ಯಾದ್ಯಂತ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೆ ಬಸ್ ಸೇವೆ ಪುನರಾಂಭಿಸಬೇಕು, ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಿ, ಹಾಸ್ಟಲ್ಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾರಂಭಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಇದರ ವತಿಯಿಂದ ತಹಶೀಲ್ದಾರರಾದ ಶ್ರೀ ಕಿರಣ್ ಗೊರಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿಯ ಪ್ರಮುಖರಾದ ಜಯಸೂರ್ಯ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ಶೆಟ್ಟಿ , ಸುಚಿನ್, ದಿನೇಶ್, ರೋಹಿತ್, ಸಚಿನ್ ಉಪಸ್ಥಿತರಿದ್ದರು.