ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು.
ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ಜಯ. ಸಿ ಕೋಟ್ಯಾನ್, ಗುಂಡು ಅಮಿನ್, ವಾಸುದೇವ ಸಾಲಿಯಾನ್, ಸದಾನಂದ ಬಂಗೇರ, ಎಂ.ಎಂ ಸುವರ್ಣ, ಕೆ.ಕೆ ಕಾಂಚನ್, ಹಿರಿಯಣ್ಣ ಚಾತ್ರಬೆಟ್ಟು, ವಿನಯ್ ಕರ್ಕೇರಾ, ಶಿವರಾಮ ಕೋಟ, ಜಗದೀಶ್ ಮಾರ್ಕೊಡು, ಮನೋಜ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವರಾಂ ಕೆಎಂ ಕೋಟ ಮಾತನಾಡಿ ಸ್ವರ್ಣ ಕಲಶ ಅರ್ಪಣೆಯ ರೂಪುರೇಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ನಿಧಿ ಸಂಗ್ರಹಣೆಯ ಬಗ್ಗೆ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ಮಾತನಾಡಿ, ಕಳಶ ಅರ್ಪಣೆಯ ಈ ನಿಧಿ ಸಂಗ್ರಹದಲ್ಲಿ ದೇವಿಯ ಪ್ರತಿಯೊಬ್ಬ ಭಕ್ತರೂ ದೇಣಿಗೆಯನ್ನು ನೀಡಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮುದಾಯದ ಭಕ್ತರಲ್ಲಿ ವಿನಂತಿಸಿಕೊಂಡರು.