ಕುಂದಾಪುರ ( ಸೆ,25):ಪಂಡೀತ್ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ಅಂಗವಾಗಿ ಕುಂದಾಪುರ ಮಂಡಲ ಕಾರ್ಯಾಲಯದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಪುಷ್ಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸ್ವಾತಂತ್ರ್ಯ ನಂತರ ಕುಟುಂಬ ರಾಜಕಾರಣದ ಪಕ್ಷವೊಂದು ಬಲಿಷ್ಠವಾಗಿ ಬೆಳೆದಿದ್ದ ಸಮಯದಲ್ಲಿ ರಾಷ್ಟ್ರೀಯತೆ, ರಾಷ್ಟ್ರಪರ ಚಿಂತನೆಯ ಪಕ್ಷವೊಂದು ಬೇಕು ಎನ್ನುವ ನೆಲೆಯಲ್ಲಿ ಜನಸಂಘ ಕಟ್ಟಿ ಅದನ್ನು ಸಂಘಟಿಸುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ದೀನದಯಾಳ್ ಉಪಾಧ್ಯಾಯರ ಬದುಕು ಪ್ರಸ್ತುತ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಬೇಕು ಎಂದು ಪ್ರಾಸ್ತವಿಕವಾಗಿ ಮಾತನಾಡಿದರು.

ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಯವರು ಮಾತನಾಡಿ ಕೇವಲ ಶಾಂತಿಯಿಂದಲೇ ಸ್ವಾತಂತ್ರ್ಯ ದೊರೆಯಿತೆಂದು ಕೆಲವು ಡೋಂಗಿ ರಾಷ್ಟ್ರೀಯತೆಯ ನಾಯಕರು ಮುನ್ನಲೆಗೆ ಬಂದು ಕುಟುಂಬಕ್ಕಾಗಿ ಪಕ್ಷ ಸ್ಥಾಪನೆಯಾದ ಕಾಲಘಟ್ಟದಲ್ಲಿ ಸಂಘಪರಿವಾರದ ಹಿನ್ನೆಲೆ ಯಿಂದ ಜನಸಂಘ ಕಟ್ಟಿ ರಾಷ್ಟ್ರೀಯತೆಯನ್ನು ಸಾರಿ ಅದರಿಂದ ದೇಶದ ವ್ಯವಸ್ಥೆಯನ್ನ ಬಲಿಷ್ಠಗೊಳಿಸಲು ಹೊರಟ ದೀನದಯಾಳ್ ಅಂತಹ ನಾಯಕರ ಪರಿಕಲ್ಪನೆಯೇ ಪ್ರಸ್ತುತ ಭಾರತದ ವೈಭವ ಸ್ಥಿತಿ. ದೀನದಯಾಳ್, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಂದಿನ ಕಲ್ಪನೆಯನ್ನೇ ಇಂದು ಮೋದಿ ಜೀ ನೇತೃತ್ವದ ಸರ್ಕಾರ ದೇಶದಲ್ಲಿ ಜಾರಿಗೆ ತರುತ್ತಿದೆ, ಈ ಸಿದ್ದಾಂತ ದೇಶದ ಉನ್ನತಿ, ದೇಶದ ಭದ್ರತೆಗೆ ಬುನಾದಿ ಎಂದು ದೀನದಯಾಳ್ ಉಪಾಧ್ಯಾಯರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಉಪಾಧ್ಯಕ್ಷರಾದ ಸಂಜೀವ ದೇವಾಡಿಗ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಸುದೀರ್ ಕೆ.ಎಸ್, ನಗರ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್, ಮಂಡಲ ಪಧಾದಿಕಾರಿಗಳು, ವಿವಿಧ ಮೋರ್ಚಾ,ಪ್ರಕೋಷ್ಠಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್ ಪ್ರತಿಜ್ಞಾ ವಿಧಿ ವಾಚಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ನಿರೂಪಿಸಿ, ಸುರೇಶ್ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಸಂಜೀವ್ ದೇವಾಡಿಗ ವಂದಿಸಿದರು.










