ಕೋಡಿ(ಫೆ. 15): ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಫೆಬ್ರವರಿ 22 ರಂದು ಬ್ರಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಬ್ರಹತ್ ಉದ್ಯೋಗ ಮೇಳದಲ್ಲಿ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪೆನಿಗಳು ಭಾಗವಹಿಸಲಿದೆ. ಎಲ್ಲಾ ಪದವಿ, ಮತ್ತು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಹಾಗೂ 18 ವರ್ಷ ಮೇಲ್ಪಟ್ಟ SSLC, PUC, ITI & ಡಿಪ್ಲೋಮಾ ಅರ್ಹತೆ ಪಡೆದಿರುವವರಿಗೂ ಅವಕಾಶ ಕಲ್ಪಿಸಲಾಗಿದೆ.
ಉಚಿತ ನೋಂದಣಿ ಕಲ್ಪಿಸಲಾಗಿದ್ದು ಜೊತೆಗೆ ವಿಶೇಷಚೇತನರಿಗೂ ಉಚಿತ ತರಬೇತಿಯೊಂದಿಗೆ ಉದ್ಯೋಗವಕಾಶ ನೀಡಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.7019693540, 7899633387