ಕುಂದಾಪುರ (ಸೆ, 29): ಲಯನ್ಸ್ ಕ್ಲಬ್ ಕೊಡಮಾಡುವ ಅಂತರಾಷ್ಟ್ರೀಯ ಪ್ರಶಸ್ತಿ “ಇಂಟರ್ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್ ” ಉಪನ್ಯಾಸಕ ,ನಿರೂಪಕ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಲಭಿಸಿದೆ.ಇತ್ತೀಚೆಗೆ ಉಡುಪಿಯ ಅಮೃತ ಗಾರ್ಡನ್ ನಲ್ಲಿ ನಡೆದ ಮಾನ್ಯತೆ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಇವರು ಕಳೆದ ಲಯನ್ಸ್ ವರ್ಷ ದಲ್ಲಿ ತನ್ನ ಕ್ಲಬ್ನಲ್ಲಿ 200 % ಮೆಂಬರ್ ಶಿಪ್ ಗ್ರೋತ್ ನೀಡಿರುವುದರ ಜೊತೆಗೆ ಲಯನ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗೆಲುವನ್ನು ಪಡೆದಿದ್ದು, ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಲಯನ್ಸ್ ಜಿಲ್ಲೆ 317 ಸಿ ಗೆ ಒಂದು ಲಿಯೋ ಕ್ಲಬ್ , ಮೂರು ಲಯನ್ಸ್ ಕ್ಲಬ್ ಗಳನ್ನು ಕೊಟ್ಟಿರುತ್ತಾರೆ. ಇವರು 3 ಬಾರಿ ಕ್ಲಬ್ನ ಅಧ್ಯಕ್ಷರಾಗಿ , ಸ್ಕೂಲಿಂಗ್ ಎಂಡ್ ಸೆಮಿನಾರ್ ಜಿಲ್ಲಾಧ್ಯಕ್ಷರಾಗಿ, ಪ್ರಸ್ತುತ ಲಯನ್ಸ್ ವರ್ಷ ದಲ್ಲಿ ಇಂಟರ್ನ್ಯಾಷನಲ್ ಪ್ರೆಸಿಡೆಂಟ್ ಪ್ರೋಗ್ರಾಂ ಚೀಫ್ ಕೋ ಆರ್ಡಿನೇಟರ್ ಆಗಿದ್ದಾರೆ.
ಈ ಹಿಂದೆ ಇವರು ಎರ್ಮಜಿಂಗ್ ಲಯನ್ ಆಫ್ ದಿ ಡಿಸ್ಟ್ರಿಕ್ಟ್ , ಮಲ್ಟಿಪಲ್ ಯಂಗ್ ಲಯನ್ ಅವಾರ್ಡ್ , ದ್ ಬೆಸ್ಟ್ ಎಕ್ಸ್ಟೇನ್ ಶನ್ ಚೇರ್ಮನ್ ಅವಾರ್ಡ್ , ಮುಂಬಯಿಯ ಬೊರವಿಲಿಯ ಪ್ರಭೋದನ್ ಠಾಕ್ರೆ ಅಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಸ್ಟ್ ಇಂಡಿಯನ್ ಆ್ಯಂಕರ್ ನ್ಯಾಷನಲ್ ಅವಾರ್ಡ್ , ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗೆ ಭಾಜನರಾಗಿರುತ್ತಾರೆ.