ಕುಂದಾಪುರ (ಸೆ,30): ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮ ದಡಿಯಲ್ಲಿ ಕುಂದಾಪುರ ಯುವ ಜನ ಕ್ರೀಡಾಂಗಣ ಸಂಕೀರ್ಣ ದ ಹೆಲ್ಪ್ ಲೈನ್ ಕಚೇರಿ ಯಲ್ಲಿ ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ವಿಜೇತ ಮಹೇಶ್ ಹೈಕಾಡಿ ಯವರನ್ನು ತಾಲೂಕು ಕ್ರೀಡಾಂಗಣ ಸಮಿತಿಯ ಯೋಜನಾಧಿಕಾರಿ ಕುಸುಮಾಕರ ಶೆಟ್ಟಿ ಯವರು ಸನ್ಮಾನಿಸಿದರು.
ಸನ್ಮಾನ ಪಡೆದು ಮಾತನಾಡಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ ರಿ.ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ ಮೊದಲ ಬಾರಿಗೆ ಖಾಸಗಿ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಪರಂಪರೆಯನ್ನು ಆರಂಭಿಸಿದೆ. ಉಡುಪಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ನಾನು ಆಯ್ಕೆ ಆಗಿರುವುದು ಸಂತೋಷ ತಂದಿದೆ.
ಜೆಸಿಐ ಕುಂದಾಪುರ ಸಿಟಿ ಆಶ್ರಯದ ” ಸೆಲ್ಯೂಟ್ ದ ಸೈಲೆಂಟ್ ವರ್ಕರ್ಸ್ ” ಕಾರ್ಯಕ್ರಮದಡಿ ಗುರುತಿಸಿ ಸನ್ಮಾನ ಮಾಡುವುದು ಅತೀವ ಸಂತಸ ನೀಡುತ್ತದೆ. ಖಾಸಗಿ ಶಾಲೆಗಳ ಶಿಕ್ಷಕರ ಪ್ರತಿಭೆ ,ಅವರ ಕಾರ್ಯದಕ್ಷತೆಯನ್ನು ಸರ್ಕಾರ ಗುರುತಿಸುವುದಿಲ್ಲ.ಸರ್ಕಾರ ಕೊಡುವ ಪ್ರಶಸ್ತಿಯಿಂದ ವಂಚಿತರನ್ನಾಗಿ ಮಾಡಿದೆ.ಅಂತಹ ಸಂದರ್ಭದಲ್ಲಿ ರಾಜ್ಯ ಮಟ್ಟದ ಖಾಸಗಿ ಶಿಕ್ಷಕರ ಉಪನ್ಯಾಸರ ಬಳಗ ಪ್ರಶಸ್ತಿ ನೀಡುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿದೆ.ಕೊರೊನಾ ಕಾಲ ಘಟ್ಟದ ಎರಡು ವರ್ಷಗಳು ಶಿಕ್ಷಕ ಜೀವನ ದುರ್ಭರವಾಗಿದೆ.
ಮೂಲವೇತನ ,ಸೇವಾಭದ್ರತೆ ನಮ್ಮ ಮೊದಲ ಆದ್ಯತೆ. ಅದನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಕಾಣುತಿದೆ.ನಮ್ಮ ಹೋರಾಟದಲ್ಲಿ ನಿಮ್ಮ ಸಹಭಾಗಿತ್ವವನ್ನು ಸಹಕಾರವನ್ನು ಅಪೇಕ್ಷೆ ಪಡುತ್ತೇವೆ. ಜೆಸಿಐ ಕುಂದಾಪುರದ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಮಹೇಶ್ ಹೈಕಾಡಿ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಶಶಿಧರ ಶೆಟ್ಟಿ ಸಾಲಗದ್ದೆ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ ಭಂಡಾರಿ ,ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ,ಪೂರ್ವಾಧ್ಯಕ್ಷ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಚರಣ್ ನಾವಡ ಜಯಚಂದ್ರ ಶೆಟ್ಟಿ ,ಕಾರ್ಯದರ್ಶಿ ಗುರುರಾಜ್ ಕೊತ್ವಾಲ್, ಉಪಾಧ್ಯಕ್ಷ ಅಭಿಲಾಶ್ ,ಜೇಸಿರೇಟ್ ಅಧ್ಯಕ್ಷೆ ಡಾ.ಸೋನಿ, ಕಾರ್ಯದರ್ಶಿ ಡಾ .ಅಶ್ವತಿ ಇನ್ನಿತರರು ಉಪಸ್ಥಿತರಿದ್ದರು.