ನೆನಪುಗಳ ಮಾತು ಮಧುರ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಅಲ್ವ?.. ನನ್ನ ಜೀವನದಲ್ಲಿ ನನಗೆ ಅಚ್ಚೆಳೆದು ಉಳಿದ ನೆನಪು ಎಂದರೆ ಅದು ನನ್ನ ಕಾಲೇಜು ದಿನದ ನೆನಪುಗಳು. ಆ ದಿನವನ್ನೆಲ್ಲಾ ಮತ್ತೇ ನೆನಪಿಸಿಕೊಂಡರೆ ಕಣ್ಣಿನಂಚಿನಲ್ಲಿ ಕಂಬನಿ ಮೂಡುತ್ತದೆ.
ಪಿಯುಸಿ ಮುಗಿದಿತ್ತು. ಮುಂದೇನು ಎಂಬ ಪ್ರಶ್ನೆ? ಮನೆಯವರ ಆಸೆ ಈಡೇರಿಸಲಾ? ಅಕ್ಕಪಕ್ಕದ ಮನೆಯವರ ಆಸೆ ಈಡೇರಿಸಲಾ ? ನನ್ನ ಆಸೆ ಈಡೇರಿಸಿಕೊಳ್ಳಲಾ? ಎಂಬ ಗೊಂದಲ.. ಅದೇನೇ ಆಗಲಿ ಎಂದು ಒಂದೆರಡು ಕಾಲೇಜಿನ ಅರ್ಜಿ ತಂದೆ ಕರೆ ಬಂತು ಕಾಲೇಜಿಗೆ ಸೇರುವಂತೆ. ಆದರೆ ನನ್ನ ಸ್ನೇಹಿತನೊಬ್ಬ ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ ಕ್ಕೆ ಸೇರಿದ್ದಾರೆ ನಾನು ಅದೇ ಕಾಲೇಜಿಗೆ ಸೇರಿದೆ.
ಕಾಲೇಜಿನ ಮೊದಲ ದಿನ ಬಾವಿಯಲ್ಲಿರುವ ಕಪ್ಪೆಯನ್ನು ಹೊಸ ಜಗತ್ತಿಗೆ ಪರಿಚಯಿಸಿದ ದಿನವದು. ಮುಖ್ಯ ದ್ವಾರದ ಬಳಿ ಬರೆದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಹಿತನುಡಿ ತುಂಬಾ ಇಷ್ಟವಾಯಿತು. ಕಾಲೇಜಿನಲ್ಲಿ ಹೊಸ ಮುಖಗಳ ಪರಿಚಯ, ಹೊಸ ರೀತಿಯ ಅನುಭವ ತುಂಬಾ ಖುಷಿಕೊಟ್ಟಿತು. ಹೀಗೆ ನನ್ನ ಕಾಲೇಜು ದಿನಗಳು ಕಳೆಯುತ್ತಾ ಬಂತು…. College Day, Talents Day ಅಂತ ಹೊಸರೀತಿಯ ಅನುಭವ. ಅದ್ಭುತ ವಾಗಿತ್ತು.
ಕಾಲೇಜಿನಲ್ಲಿ ನನ್ನ ಗುರುತಿಸುವಿಕೆ ಆಗಿದ್ದು ಗಾಂಧಿ ಎಂಬ ನಾಟಕದಿಂದ. ಈಡೀ ಕಾಲೇಜೇ ನನ್ನ ಅಭಿನಯಕ್ಕೆ ಮೆಚ್ಚುಗೆ ನೀಡಿ ನನ್ನನ್ನು ಗಾಂಧಿ ಎಂದೇ ಕರೆದರು. ಇದಕ್ಕೆಲ್ಲಾ ಕಾರಣ ನನ್ನ ಸಹಕಲಾವಿದರು , ತರಬೇತಿ ನೀಡಿದವರು, ಶಿಕ್ಷಕರು, ಪ್ರಾಂಶುಪಾಲರು, ಸ್ನೇಹಿತರು ಹಾಗೆ ನನ್ನ ಮನೆಯವರು. ಹಾಗೆ ಸಮಯ ಕಳೆಯಿತು. ನಮ್ಮ ಕೊನೆಯ ಸೆಮಿಸ್ಟರ್ ಶುರುವಾಯಿತು.
ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡು ಬಂದ ನಮ್ಮನ್ನು ಕೊರೋನ ಅಂತ ಮಹಾಮಾರಿ ಅಡ್ಡಲಾಯಿತು. ಅದನ್ನೆಲ್ಲಾ ದಾಟಿ ಕಾಲೇಜು ಮುಗಿಸಿದೆವು. ನನ್ನ ಕಾಲೇಜು ನನಗೆ The Best Cultural Talent ಅವಾರ್ಡ್ ಕೊಟ್ಟು ಈ ಚಿಕ್ಕ ಪ್ರತಿಭೆಯನ್ನು ಗುರುತಿಸಿತು. ಕಾಲೇಜಿನ ಶಿಖರ ಮ್ಯಾಗಜಿನ್ ಕೂಡ ನನ್ನಲ್ಲಿರುವ ಬರವಣಿಗೆ ಗುರುತಿಸುವಲ್ಲಿ ಸಹಕಾರಿಯಾಯಿತು. ಅಲ್ಲದೆ ಹಾಡು, ನೃತ್ಯ, ಏಕಾಪಾತ್ರಭಿನಯಕ್ಕೆ ಕಾಲೇಜು ಉತ್ತಮ ವೇದಿಕೆಯಾಯಿತು. ಈಗ ವೃತ್ತಿ ಜೀವನದಲ್ಲಿ ಇರುವ ನನಗೆ ಕಾಲೇಜಿನ ನೆನಪು ಕಾಡುತ್ತದೆ. ಮತ್ತೆ ಕಾಲೇಜಿಗೆ ಮರಳಿ ಹೋಗುವ ಬಯಕೆ ಮೂಡುತ್ತಿದೆ. ನನ್ನ ಮೂರು ವರ್ಷದ ಕಾಲೇಜಿನ ನೆನಪುಗಳು ಸುಮಧುರವಾಗಲು ಅನೇಕ ನನ್ನ ಸ್ನೇಹಿತರು, ನನ್ನ ಸೀನಿಯರ್, ಜೂನಿಯರ್, ಶಿಕ್ಷಕರು, ಕಾರಣರಾಗಿದ್ದಾರೆ. ಅವರಿಗೆ ನನ್ನ ಅಂತರಾಳದಿಂದ ಧನ್ಯವಾದಗಳು….
ಲೇಖನ – ಅಭಿಷೇಕ್ ಬಡಾಮನೆ
ಪ್ರಾಕ್ತನ ವಿದ್ಯಾರ್ಥಿ
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ