ಕುಂದಾಪುರ (ಅ, 02) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 2019-20ರ ಶೈಕ್ಷಣಿಕ ವರ್ಷದ ‘ಶಿಖರ’ ವಾರ್ಷಿಕ ಸಂಚಿಕೆಯನ್ನು ಎಂಆರ್ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ. ಯವರು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ವಿಶ್ವವಿದ್ಯಾನಿಲಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ವಾರ್ಷಿಕ ಸಂಚಿಕೆ ವರ್ಷದ ಕಾರ್ಯಕ್ರಮಗಳ ಜೊತೆಗೆ ಸಂಸ್ಥೆಯ ಗುಣಮಟ್ಟದ ಪ್ರತೀಕ ಆಗಿರುತ್ತದೆ ಎಂದು ಶುಭಹಾರೈಸಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರಿನ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಯುನಿವರ್ಸಲ್ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ನ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿ, ಉಳ್ತೂರು ಮೋಹನದಾಸ ಶೆಟ್ಟಿ, ಬಿ.ಎಸ್. ಸುರೇಶ ಶೆಟ್ಟಿ, ವಸಂತ್ ಗಿಳಿಯಾರ್ ಮತ್ತು ಪ್ರಾಂಶುಪಾಲರಾದ ಪ್ರೊ .ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ, ವಿದ್ಯಾರ್ಥಿ ಕ್ಷೇಮಪಾಲನ ಕಾರ್ಯದರ್ಶಿ ಸಂಪತ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾರ್ಷಿಕ ಸಂಚಿಕೆಯ ಸಂಪಾದಕೀಯ ಮಂಡಳಿಯ ಸದಸ್ಯರಾದ, ಸುಧೀರ್ ಕುಮಾರ್, ಅಮೃತಾ, ಹರೀಶ್ ಬಿ, ವನಿತಾ ಜಿ , ಆಶಾ ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಪಾದಕರಿಗೆ ಸಂಚಿಕೆಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. ಸಂಪಾದಕೀಯ ಸದಸ್ಯರಾದ ರಕ್ಷಿತ್ ರಾವ್ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿ, ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.