ಕುಂದಾಪುರ (ಸೆ, 25) : ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ-Azadi ka Amruth Mahotsav- India @ 75 “ಫಿಟ್ ಇಂಡಿಯಾ ಫ್ರೀಡಂ ರನ್-2.0” ಜಾಥಾವನ್ನು ಡಾ.ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಸೆಪ್ಟೆಂಬರ್, 25 ರಂದು ಹಮ್ಮಿಕೊಳ್ಳಲಾಯಿತು.
ಎಂಆರ್ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ ಯವರು ಫಿಟ್ ಇಂಡಿಯಾ ರನ್ 2.0 ಜಾಥಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ .ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಸಹ ಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ, ಎನ್.ಸಿ. ಸಿ ಆಧಿಕಾರಿ ಶಿವರಾಜ್. ಸಿ. ಅರೆಹೊಳೆ, ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ಉಪಸ್ಥಿತರಿದ್ದರು.
ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂಸೇವಕರು ಜಾಥಾದಲ್ಲಿ ಸಕ್ರಿಯವಾಗಿ ಭಾಗವಹಿಸಿ ಭರತ ಖಂಡದ ಸ್ವತಂತ್ರೋತ್ಸವದ 75 ನೇ ವರ್ಷಾಚರಣೆ ಆಜಾದಿ ಕಾ ಅಮೃತ ಮಹೋತ್ಸವ’ದ ಈ ಶುಭ ಸಂದರ್ಭದಲ್ಲಿ ಫಿಟ್ ಇಂಡಿಯಾ ಫ್ರೀಡಂ_ರನ್-2.0 ಪ್ರತಿಜ್ಞೆ ಕೈಗೊಂಡರು. ತದನಂತರ ಕಾಲೇಜಿನಿಂದ ಕುಂದಾಪುರಕ್ಕೆ ಸರಿಸುಮಾರು ಎರಡು ಕಿಲೋ ಮೀಟರ್ ಜಾಥಾ ಹಮ್ಮಿಕೊಳ್ಳಲಾಯಿತು.