ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ.

ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











