ಕುಂದಾಪುರ (ಅ,10): ವಿಶ್ವ ಸೇವಾ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಪ್ರತೀ ವರ್ಷ ಸೇವೆಯೇ ಉಸಿರು ಎನ್ನುವ ಧ್ಯೇಯಯೊಂದಿಗೆ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಹಾಗೆಯೇ ಈ ವರ್ಷ ಅದೇ ರೀತಿ ಎಳೆಯ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿರುವ 13 ವರ್ಷದ ಬಾಲಕ ವಿರಾಟ್ ನನ್ನು ಈ ಬಾರಿ ಗುರುತಿಸಿ ಗೌರವಿಸುವ ಕೆಲಸಕ್ಕೆ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಮುಂದಾಗಿದೆ.
ವಿರಾಟ್ ಎನ್ನುವ ಪುಟ್ಟ ಬಾಲಕನ ಮಾನವೀಯ ನೆಲೆಯ ಸೇವೆಯನ್ನು ಗುರುತಿಸಿದ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್: ರಾಜಸ್ಥಾನದ ಮೂಲದ 8 ನೇ ತರಗತಿ ಓದುತ್ತಿರುವ ವಿರಾಟ್ ಕಳೆದ ಒಂದೂವರೆ ವರ್ಷದ ಹಿಂದೆ ಕರೋನ ದೇಶವ್ಯಾಪಿ ಆವರಿಸಿದ ಸಂದರ್ಭದಲ್ಲಿ ದೇಶದ ಎಲ್ಲ ಕಡೆ ಲಾಕ್ಡೌನ್ ಇದ್ದ ಸಂದರ್ಭದಲ್ಲಿ, ಶಾಲೆಗಳೆ ಆರಂಭವಾಗದ ಹಿನ್ನಲೆಯಲ್ಲಿ ದೂರದ ರಾಜಸ್ಥಾನದಿಂದ ಕುಂದಾಪುರದ ತನ್ನ ಮಾವನ ಮನೆಗೆ ಬರುತ್ತಾನೆ.
ಮಾವನ ಮನೆಯಲ್ಲಿ ಇದ್ದಾಗ ಲಾಕ್ ಡೌನ್ ನ ಪರಿಣಾಮ ಎದುರಿಸುತ್ತಿರುವ ಆರ್ ಎನ್ ಶೆಟ್ಟಿಯಲ್ಲಿರುವ 4 ಬೀದಿ ನಾಯಿಗಳು ಆತನ ಕಣ್ಣಿಗೆ ಕಾಣುತ್ತದೆ. ಆಗ ಅತನ ಮನಸ್ಸು ನಾಯಿಗಳ ಬಗ್ಗೆ ಮಿಡಿಯುತ್ತದೆ. ಹಾಲ್ ನಲ್ಲಿ ನೆಡೆಯುವ ಕಾರ್ಯ ಕ್ರಮಗಳನ್ನೆ ನಂಬಿಕೊಂಡು ಹಸಿವನ್ನು ನೀಗಿಸಿ ಕೊಳ್ಳುತ್ತಿರುವ 4 ಬೀದಿ ನಾಯಿಗಳ ಹಸಿವಿನ ಯಾತನೆ ನಿಗಿಸಿಬೇಕು ಎನ್ನುವ ಪಣ ತೊಟ್ಟ ಬಾಲಕ ದಿನಂಪ್ರತಿ 4 ಬಿಸ್ಕೆಟ್ ಪೊಟ್ಟಣವನ್ನು ಆ ಬೀದಿ ನಾಯಿಗಳಿಗೆ ನೀಡಲು ಆರಂಭಿಸುತ್ತಾನೆ.
ಅಂದು ಆರಂಭ ಮಾಡಿದ ಬಾಲಕ ಇಂದಿನವರೆಗೂ 4 ನಾಯಿಗಳಿಗೆ 4 ಬಿಸ್ಕೆಟ್ ಪೊಟ್ಟಣವನ್ನು ದಿನಾಲೂ ನೀಡುತ್ತಾ ಬರುತ್ತಿದ್ದಾನೆ. ದಿನಕ್ಕೆ 40 ರೂಪಾಯಿ ಹಾಗೆ ತಿಂಗಳಿಗೆ 1200 ರೂಪಾಯಿ ಯನ್ನು ಮಾನವೀಯ ಅನುಕಂಪದ ನೆಲೆಗೆ ಮೀಸಲಿಟ್ಟಿದ್ದಾನೆ.
ಕರೋನ ಸಂಕಷ್ಟದ ಈ ಸಂದರ್ಭದಲ್ಲಿಯೇ ಜೀವನ ನಡೆಸಲು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಅದರಲ್ಲೂ ತಾನೇ ಬಿಸ್ಕತ್ ತಿನ್ನುವ ವಯಸ್ಸಿನ ಬಾಲಕ ಬೀದಿ ನಾಯಿಗಳಿಗೆ ತಿಂಗಳಿಗೆ 1200 ರೂಪಾಯಿ ಹಣವನ್ನು ಸೇವೆಗೆ ಮೀಸಲಿರಿಸುತ್ತಾನೆ. ಅಂತಹ ಬಾಲಕನನ್ನು ಗುರುತಿಸಿ ಗೌರವಿಸ ಬೇಕಾದದ್ದು ಸಂಘ ಸಂಸ್ಥೆಗಳು ಕರ್ತವ್ಯವೂ ಹೌದು. ಆ ನೆಲೆಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಬಾಲಕನನ್ನು ಸನ್ಮಾನಿಸಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ
ಲಯನ್ ಜಯಶೀಲ ಶೆಟ್ಟಿ ಕಂದಾವರ, ಪ್ರಧಾನ ಕಾರ್ಯದರ್ಶಿ ಲಯನ್ ಗಿರೀಶ್ ಮೇಸ್ತ, ಕೋಶಾಧಿಕಾರಿ ಲಯನ್ ಅಣ್ಣಪ್ಪ ಶೆಟ್ಟಿ ಉಪಸ್ಥಿತರಿದ್ದರು.