ಬ್ರಹ್ಮಾವರ(ನ,26): ಸರಕಾರಿ ಪೌಢಶಾಲೆ ಜಾನುವಾರು ಕಟ್ಟೆ ಬ್ರಹ್ಮಾವರ ವಲಯದಲ್ಲಿ ನ,26 ರಂದು ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು.
ಈ ಪ್ರಯುಕ್ತ ನಾಡಿನ ಪ್ರಸಿದ್ಧ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಯವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತಾದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಲ್ಲಿ ಸಂವಿಧಾನ ಕುರಿತು ಅರಿವು ಮೂಡಿಸಿದರು.ಮುಖ್ಯ ಶಿಕ್ಷಕರಾದ ಶ್ರೀ ರಾಮಕೃಷ್ಣ ನಾಯಕ್ ರವರು ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ವಿಧ್ಯಾರ್ಥಿಗಳಿಗೆ ಭೋದಿಸಿದರು.ಸಹ ಶಿಕ್ಷಕರಾದ ಶ್ರೀಮತಿ ಮಮತಾ ಧನ್ಯವಾದ ಅರ್ಪಿಸಿದರು.