ಹೆಮ್ಮಾಡಿ(ಅ,17): ಮಿರಾಕಲ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರಾದ ಪ್ರವೀಣ್ ರವರ ಈ ಡ್ಯಾನ್ಸ್ ಟೀಮ್ ಸತತ ಏಳು ವರ್ಷಗಳಿಂದ ನೃತ್ಯ ತರಬೇತಿಯನ್ನು ನೀಡಿ ಹಲವಾರು ನೃತ್ಯಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಖ್ಯಾತಿ ಈ ತಂಡಕ್ಕಿದೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಡ್ಯಾನ್ಸ್- ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ತನ್ನದೇ ಆದ ಛಾಪನ್ನು ಮೂಡಿಸಿದೆ. ಪ್ರಸ್ತುತ ಮಿರಾಕಲ್ ಡ್ಯಾನ್ಸ್ ಕಟ್ ಬೆಲ್ತೂರುನಲ್ಲಿ ರಾಮ ಲಕ್ಷ್ಮಣ ಸಭಾಗ್ರಹ ಹೆಮ್ಮಾಡಿ (ಕೊಲ್ಲೂರು ರೋಡ್)ಲ್ಲಿ ಹೊಸದಾಗಿ ನೃತ್ಯ ತರಬೇತಿ ಕೇಂದ್ರವನ್ನು, ಆರಂಭಿಸಿದ್ದು ಮಿರಾಕಲ್ ಡಾನ್ ಸ್ಟುಡಿಯೋದಲ್ಲಿ ಕಲಿತ ಶ್ಲಾಘ ಸಾಲಿಗ್ರಾಮ, ಧನ್ವಿ ಪೂಜಾರಿ ಮರವಂತೆ ಇನ್ನೂ ಕೆಲವು ಪ್ರತಿಭೆಗಳು ಉನ್ನತಮಟ್ಟದ ಸಾಧನೆ ಮಾಡಿದ ಕಲಾವಿದರಾಗಿ ರೂಪುಗೊಂಡಿದ್ದಾರೆ .ಶಾಲೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶಾಲೆಯ ಕಲಿಕೆಯೊಂದಿಗೆ ನಮ್ಮ ಆಸಕ್ತ ನೃತ್ಯ ಕಲಿಯಲು ಅನುವಾಗಲಿ ಎಂದು ಶನಿವಾರ ಮತ್ತು ಭಾನುವಾರ ಹೊಸ ವಿದ್ಯಾರ್ಥಿಗಳಿಗೆ ನುರಿತ ನೃತ್ಯಗಾರ ರಿಂದ ಡಾನ್ಸ್ ತರಭೇತಿ ಪ್ರಾರಂಭಿಸಲಾಗಿದೆ.
ಡಾನ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಗುರುಗಳಾದ ಪ್ರವೀಣ್ ಬಾಳಿಕೆರೆ ಇವರು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಡಾನ್ಸ್ ಸ್ಟುಡಿಯೋ ಒಮ್ಮೆ ಭೇಟಿಕೊಟ್ಟು ಇಲ್ಲಿನ ಶಿಸ್ತು ಮತ್ತು ನಿಯಮಗಳನ್ನು ವೀಕ್ಷಿಸಿ ತಮ್ಮ ಮಕ್ಕಳನ್ನು ನೃತ್ಯ ಅಭ್ಯಾಸಕ್ಕೆ ಸೇರ್ಪಡಿಸಿ ಎಂದು ವಿನಂತಿಸಿಕೊಂಡರು.
ವರದಿ : ಈಶ್ವರ ಸಿ ನಾವುoದ