ಸಂತೋಷ ಮತ್ತು ಸಂಗೀತ ಎರಡೂ ಒಂದನ್ನು ಬಿಟ್ಟು ಮತ್ತೊಂದು ಇರಲಾರದೇನೋ ಅನ್ನುವಷ್ಟು ಜೋಡಿಯಾಗಿದೆ. ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾಧಿಸುತ್ತೇವೆ. ಆದರೆ ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ ಎಂಬ ಮಾತಿದೆ. ಸಂತೋಷದ ಹಾಡುಗಳು ಹಾಗೆಯೇ ಸ್ವಲ್ಪ ವೇಗದ ಉತ್ಸಾಹದ ದಾಟಿರುತ್ತದೆ. ದುಃಖದ ಹಾಡುಗಳು ನಿಧಾನವಾಗಿ ಸಾಗುತ್ತದೆ.

ಬದುಕೇ ಒಂದು ಸಂಗೀತ ಎಂದುಕೊಂಡರೆ ಖುಷಿಯಲ್ಲಿರುವಾಗ ಕ್ಷಣಗಳು ಬೇಗಬೇಗನೆ ಸರಿದು ಹೋಗುತ್ತದೆ. ದುಃಖದ ಸನ್ನಿವೇಶಗಳು ಬೇಗನೆ ಕರಗುವುದೇ ಇಲ್ಲ .ಕಷ್ಟಗಳು ಹಾಗೂ ದುಃಖ ನಮ್ಮ ಮನಸ್ಸನ್ನು ಕರಗಿಸಿ ಬದುಕಿನ ಸಾಹಿತ್ಯವನ್ನು ಅರ್ಥವಾಗಿಸುತ್ತದೆ. ಸಂತೋಷದ ಬದುಕಿಗೆ ಉತ್ತೇಜನ ಅದೊಂದು ಸುಮಧುರ ಸಂಗೀತದಂತೆ.

ಎಲ್ಲಾ ಕಲೆಗಳ ಗಿಂತಲೂ ಎಲ್ಲರನ್ನೂ ಅರಳಿಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ .ಕೆರಳಿದವರನ್ನು ಅರಳಿಸಬಹುದು, ಜೀವನವೇ ಬೇಡ ಎಂದುಕೊಂಡವರನ್ನು ಸಂಗೀತ ಬದುಕಿನ ಆಶಾವಾದ ಪಥದತ್ತ ಕೊಂಡೊಯ್ಯಬಹುದು, ಜೀವನ, ಪ್ರೀತಿ ಹುಟ್ಟಿಸುವ ಅನನ್ಯ ಸಾಧನ ಸಂಗೀತ ಎಂದರೆ ತಪ್ಪಾಗಲಾರದು.

ಪ್ರತಿಭೆಗಳು ಯಾರಲ್ಲಿ ಎಲ್ಲಿ ಹೇಗೆ ಅಡಕವಾಗಿರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಇಂದು ವೈರಲ್ ಸ್ಟಾರ್ ಹಾಡುಗಾರ “ರವಿ ಮುಕ್ರಿ ಬೋರೋಳ್ಳಿ ಯವರ ಪರಿಚಯ ಮತ್ತು ಆತನ ಕನಸು-ಮನಸು ಆಲೋಚನೆ ಮತ್ತು ಯೋಜನೆ ಗಳ ಪುಟಗಳನ್ನು ತಮ್ಮ ಮುಂದೆ ತೆರೆದಿಡುತ್ತಿದ್ದೇನೆ.

ನಾಗಪ್ಪ ಮತ್ತು ಗಿರಿಜಾ ದಂಪತಿಗಳಿಗೆ ಐದು ಜನ ಮಕ್ಕಳು. ರವಿ ದೊಡ್ಡವನು, ತಮ್ಮ ಗುರು ಮತ್ತು ಚರಣ್ ತಂಗಿ ಮಂಜುಳಾ ಮತ್ತು ಅರ್ಚನಾಳ ಮುದ್ದಿನ ಒಡನಾಟದ ಅಣ್ಣ. ತಂದೆ -ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದು, ರವಿ ಕುಮಟಾದ ಒಂದು ಹೋಟೆಲ್ ನಲ್ಲಿ ಕಾರ್ಮಿಕ. ಇವರಿಗೆ ಅಂಕೋಲದ ಬೋರೋಳ್ಳಿ ಎಂಬ ಊರಿನಲ್ಲಿ ಚಿಕ್ಕದೊಂದು ಗುಡಿಸಲು.

ಈತನ ಸಂಗೀತದ ಮೇಲಿನ ಪ್ರೀತಿ ಮತ್ತು ಹಳ್ಳಿಯ ಮುಗ್ಧತೆ ಆತನ ಮಾತಿನಲ್ಲಿ ಅರ್ಥವಾಗುತ್ತದೆ. ಇತ್ತೀಚೆಗೆ ರವಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾಸ್ಪದ ಕಾಮೆಂಟ್ಸ್ ಮತ್ತು ಅಪಹಾಸ್ಯಕ್ಕೆ ಮನನೊಂದಿರುವುದು ಅಂತೂ ಸತ್ಯ. ಆತ ಯಾರ ಫೋನಿಗೂ ಹೆಚ್ಚು ಸ್ಪಂದಿಸುವುದಿಲ್ಲ .ಕೆಲವೇ ಜನಗಳ ಕರೆ ಮಾತ್ರ ಸ್ವೀಕರಿಸಿ ಉತ್ತರಿಸುತ್ತಾನೆ. ಈ ವಿದ್ಯಮಾನ ತಪ್ಪೋ ಸರಿಯೋ ನನಗೂ ಗೊತ್ತಿಲ್ಲ. ಆದರೆ ನಾನೊಂದು ಸಲಹೆ ಕೊಟ್ಟಿದ್ದೇನೆ ಯಾರದೇ ಕರೆ ಬರಲಿ ನಿನಗೆ ತೋಚಿದ್ದು ಹೇಳಿಬಿಡು. ಕರೆ ಸ್ವೀಕರಿಸದಿದ್ದರೆ ಎದುರಿನವರು ತಪ್ಪು ತಿಳಿದುಕೊಳ್ಳುತ್ತಾರೆ ಎಂದಾಗ ನನ್ನ ಈ ಮಾತಿಗೆ ಸ್ಪಂದಿಸಿ ಅಣ್ಣಾ ಆಯಿತು ಅಂದಿದ್ದಾನೆ .

ಕೆಲವು ದಿನಗಳ ಹಿಂದೆ ಈತನ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟ್ರೋಲ್ ಪೇಜುಗಳಿಗೆ ಆಹಾರವಾಗಿದ್ದು ತಮಗೆ ಎಲ್ಲಿರಿಗೂ ಗೊತ್ತಿರುವ ವಿಷಯ . ರವಿಯ ನೋಟದಲ್ಲಿ ಗೊತ್ತಾಗಿಬಿಡುತ್ತದೆ ಆತನ ಮುಗ್ಧತೆ , ವಿಭಿನ್ನತೆ ಹಾಡುಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದು .ನಿಜ ಟ್ರೊಲ್ ಗೆ ಮನ ನೊಂದಿದ್ದು ಸತ್ಯ ಆದರೆ ಆತ ಅಸಂಖ್ಯಾತ ಜನತೆಯ ಹೃದಯದಲ್ಲಿ ಸ್ಥಾನ ಪಡೆದಿದ್ದು ಕೂಡ ಟ್ರೋಲ್ ನಿಂದಲೇ….!!!
ರವಿ ಹೆಸರುವಾಸಿಯಾಗಿದ್ದು ವಿಭಿನ್ನ ಶೈಲಿಯ ಹಾಡು ಮತ್ತು ವರ್ತನೆ.ನೋಟದಿಂದಲೇ ಈಗಲೂ ಆತ ಮನಬಿಚ್ಚಿ ಹೇಳುವುದಿಷ್ಟೇ ನನ್ನ ಸಂಗೀತ ಕೇಳಿ ಟ್ರೋಲ್ ಮಾಡಿ ಖುಷಿಪಡಿ ನಾನು ನನ್ನ ಹಾಡುಗಾರಿಕೆಯ ಶೈಲಿಯಲ್ಲಿಯೇ ಸುಧಾರಿಸಿಕೊಂಡು ಹಾಡುತ್ತೇನೆ.
ನೀವು ಮೆಚ್ಚಿ ಕೊಳ್ಳಿ ಆದರೆ ಅಪಹಾಸ್ಯ ಮಾಡಬೇಡಿ. ಅರಳುವ ಪ್ರತಿಭೆಗೆ ಅನ್ಯಾಯ ಮಾಡಬೇಡಿ .ಸಂಗೀತದ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಹಾಡುವ ಬಯಕೆಯಿದೆ .ಈ ಹಿಂದೆಯೂ ಕೂಡ ನಾನು ಸಂಗೀತದ ರಿಯಾಲಿಟಿ ಶೋ ಸ್ಪರ್ಧೆಗಾಗಿ ಸಂದರ್ಶನಕ್ಕೆ ಹೋಗಿದ್ದೆ. ಆದರೆ ನನಗೆ ಅಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಬೇಸರ ಇದೆ.
ನನ್ನ ಈ ಸಂಗೀತದ ಆಸಕ್ತಿ ನೋಡಿ ಕೆಲವು ಸಾಹಿತಿಗಳು ಮತ್ತು ಚಿಂತಕ-ಬರಹಗಾರರು ಸಾಹಿತ್ಯದ ಬಗ್ಗೆ ತಿಳುವಳಿಕೆ ಹೇಳಿದ್ದಾರೆ.ನಾನು ಸಾಹಿತ್ಯ ಉಚ್ಚಾರವನ್ನು ಸುಧಾರಿಸಿಕೊಳ್ಳುತ್ತಿದ್ದೇನೆ. ನನ್ನ ಸಂಗೀತದ ಬಯಕೆಯನ್ನು ಅರಿತ ಒಬ್ಬ ಸಂಗೀತ ಗುರುಗಳು ನನಗೆ ಉಚಿತವಾಗಿ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ.
ರವಿಯನ್ನು ಮಾತನಾಡಿಸಿದಾಗ ನನ್ನ ಗಮನಕ್ಕೆ ಬಂದ ಅಂಶವೇನೆಂದರೆ ಆತನ ಸಂಗೀತ ಮತ್ತು ಹಾಡುಗಾರಿಕೆ ಬಗ್ಗೆ ಅತಿಯಾದ ಬಯಕೆಯಿದೆ.
ಅವನಲ್ಲಿ ನಾನು ಹಾಡು ಕಲಿಯಬೇಕು, ಹಾಡಬೇಕು ಮುಖ್ಯವಾಹಿನಿಗೆ ಬರಬೇಕು ಅಂತ ಆತನ ಇಚ್ಛೆಯಾಗಿದೆ. ಆದರೆ ನಾವುಗಳು ಟ್ರೋಲ್ ಮಾಡಿ ಮಜಾ ತೆಗೆದುಕೊಳ್ಳುವ ಭರಾಟೆಯಲ್ಲಿ ಆತನ ಕನಸುಗಳಿಗೆ ಮತ್ತು ಮನಸ್ಸುಗಳ ಮೇಲೆ ಬರೆ ಹಾಕಿರುವುದಂತೂ ಸತ್ಯ .ಆದರೆ ಮುಂದೆ ನಾವು ಹಾಗೆ ಮಾಡದೆ ಆತನ ಕನಸು ಮನಸ್ಸು ಮತ್ತು ಯೋಜನೆಗಳನ್ನು ಯೋಚನೆಗಳನ್ನು ಚಿಂತನೆ ಮಾಡೋಣ ಮತ್ತು ಗೌರವಿಸೋಣ.
ನಿಜ, ಆತನ ಸಂಗೀತದ ಹಾಡು ಶೈಲಿಯಲ್ಲೇ ಹಾಸ್ಯಯಿದೆ. ಆತನ ಹಾಡುವ ಶೈಲಿ ನಗುವಿಗೆ ಸೋಪಾನವಾಗಲಿ .ಆತನ ಹಾಡನ್ನು ಕೇಳೋಣ. ಖುಷಿ ಪಡೋಣ. ಆತನ ಕನಸಿಗೆ ಬಣ್ಣ ಹಚ್ಚೋಣ ಮಸಿ ಬಳಿಯುವುದು ಬೇಡ ಆತನ ಕನಸು ಮತ್ತು ಮನಸ್ಸಿಗೆ ಏಣಿ ಆಗೋಣ. ಈತನ ಪ್ರತಿಭೆ ಮೂಲೆಗುಂಪಾಗುವುದು ಬೇಡ ಹಾಗೂ ಆಗದಿರಲಿ. ಈತನಿಗೆ ರಿಯಾಲಿಟಿ ಶೋಗಳಲ್ಲಿ ಅವಕಾಶಗಳಿ ಸಿಗಲಿ, ಕೊಟ್ಟೂರು ಮುಗ್ದತೆಯನ್ನು ಬಳಿಸಿಕೊಂಡು ಅಪಹಾಸ್ಯ ಮಾಡಿ ಹಾಸ್ಯಾಸ್ಪದ ಕ್ಕೆ ಅವಕಾಶ ಕೊಡದೆ ಆತನ ಶುದ್ಧ ಹಾಡುಗಾರಿಕೆ ಹೊರಹೊಮ್ಮುವಂತೆ ಮಾಡುವ ಹೊಣೆ ರಿಯಾಲಿಟಿ ಶೋಗಳಿಗೆ ಇರುತ್ತದೆ.
ರವಿ ಶುದ್ಧ ಮತ್ತು ಸ್ಪಷ್ಟ ಹಾಡುಗಾರಿಕೆ ವಾಹಿನಿಗಳು ಹೊರತರಲಿ ಎನ್ನುವುದೇ ನಮ್ಮ ಈ ಪರಿಚಯ ಲೇಖನದ ಆಶಯ. ರವಿಯ ಕನಸು ನನಸಾಗಲಿ ….ಭವಿಸ್ಯದ ಸಂಗೀತ ತಾರೆ ನಮ್ಮ-ನಿಮ್ಮ ಮದ್ಯೆ ಮಿಂಚುತ್ತಿರಲಿ ಎಂಬ
ಹಾರೈಕೆ ನಮ್ಮದು.

ಚಿಂತಕ -ಬರಹಗಾರ









