ಕೋಟೇಶ್ವರ(ಅ,22): ಇಲ್ಲಿನ ಪದವಿ ಕಾಲೇಜು ಸಮೀಪದ ಬಸ್ ನಿಲ್ದಾಣ ಒಂದರಲ್ಲಿ ಪ್ರತಿ ರಾತ್ರಿ ಮಧ್ಯಪಾನ ಸೇವಿಸುತ್ತಿದ್ದ ತಮ್ಮ ತಂದೆ ತಾಯಿಯೊಂದಿಗೆ ಅಸುರಕ್ಷತೆಯಿಂದ ಮಲಗುತ್ತಿದ್ದ ಹನ್ನೊಂದು ವರ್ಷ ಮತ್ತು ಒಂದುವರೆ ವರ್ಷದ ಇಬ್ಬರು ಅಬಲೆಯರನ್ನು ಗಮನಿಸಿದ ಸ್ಥಳೀಯ ಆಶಾಕಾರ್ಯಕರ್ತೆಯರು ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ಗಮನಕ್ಕೆ ತಂದು ರಕ್ಷಿಸುವಂತೆ ಕೋರಿದ್ದರು.
ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲೋಕೇಶ್ ಅಂಕದಕಟ್ಟೆ ಮಾಹಿತಿ ನೀಡಿ ತುರ್ತು ರಕ್ಷಣೆಗೆ ಮನವಿ ಮಾಡಿದ್ದರು. ಅ,22 ರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ವೇತಾ ಹಾಗೂ ತಂಡ ಕೋಟೇಶ್ವರ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆತ್ತವರ ಮನವೊಲಿಸಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದರು.
ಸ್ಥಳದಲ್ಲಿ ನೆರವೇರಿದ್ದ ಆಶಾಕಾರ್ಯಕರ್ತೆಯರು ಹಾಗೂ ಸ್ಥಳೀಯರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.