ಬೆಂಗಳೂರು(ಅ 27): ಪ್ರಜ್ಞಾ ಸಾಗರ್ ಹೋಟೇಲ್ಸ್ ಆಂಡ್ ರೆಸೋರ್ಟ್ ಇದರ ಮೂರನೇ ಶಾಖೆ ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ಅ,28 ರಂದು ಬೆಂಗಳೂರಿನ ಅಂಬೇಡ್ಕರ್ ನಗರದ ಕೆ.ಆರ್ .ಟವರ್ ನಲ್ಲಿ ಶುಭಾರಂಭಗೊಳ್ಳಲಿದೆ.
ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ನ್ನು ಉದ್ಘಾಟಿಸಲಿದ್ದು, ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಸೇವಕ ಶ್ರೀ ಕಾವೇರಪ್ಪ, ಶ್ರೀ ಮನೋಹರ್ ರೆಡ್ಡಿ ,ಶ್ರೀ ರಾಜ ರೆಡ್ಡಿ, ಶ್ರೀ ಜಯಚಂದ್ರ ರೆಡ್ಡಿ, ಶ್ರೀ ವೆಂಕಟಸ್ವಾಮಿ ರೆಡ್ಡಿ, ಶ್ರೀ ಸೋಮಶೇಖರ್ ರೆಡ್ಡಿ ಹಾಗೂ ಶ್ರೀ ಸುರೇಶ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಿಕರು ಹಾಗೂ ದೇಶದ ಪ್ರತಿಷ್ಠಿತ ಹೋಟೆಲ್ ಮತ್ತು ಆದರಾತಿಥ್ಯಕ್ಕೆ ಹೆಸರುವಾಸಿಯಾದ ಶೆಫ್ ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೆಶಕರಾದ ಸಮಾಜ ಸೇವಕ ,ಕೊಡುಗೈದಾನಿ ಡಾ. ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.













