
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ ಇದೇ ಜನವರಿ 23 ರಿಂದ 25 ರವರೆಗೆ ನಡೆಯಲಿದೆ. ಭಕ್ತರಿಗೆ ಗೆಂಡ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್-19ರ ನಿಯಮದನ್ವಯ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಸರಳವಾಗಿ ಜಾತ್ರೆಯನ್ನು ಆಚರಿಸುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.










