ಕುಂದಾಪುರ (ಫೆ.01): ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮತ್ತು ಆಳವಾದ ಚಿಂತನೆ ಇರಬೇಕು, ಕೇವಲ ಪರೀಕ್ಷೆಗಾಗಿ ಅಭ್ಯಾಸ ಮಾಡಬಾರದು. ಜ್ಞಾನಕ್ಕಾಗಿ ಓದಿದರೆ, ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಮೈಂಡ್ ಪವರ್ ಲರ್ನಿಂಗ್ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರೂ ಆಗಿರುವ ಎಸ್. ಪ್ರಶಾಂತ್ ತಿಳಿಸಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಯೋಜಿಸಿದ […]
Day: February 1, 2025
ಕೋಟದಲ್ಲಿ ಕಲೋತ್ಸವ ಉದ್ಘಾಟನೆ
ಕೋಟ (ಜ,31): “ಇಂದಿನ ಕಾಲ ಘಟ್ಟದಲ್ಲಿ ಯುವ ಜನತೆ ಕಲೆ ಸಾಹಿತ್ಯದತ್ತ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಒಳ್ಳೆಯ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳಿಂದ ಕೋಟ ಪರಿಸರದ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿರುವುದು ಅಭಿನಂದನೀಯ. ಎರಡು ದಿನಗಳ ಕಲೋತ್ಸವ ಯಶಸ್ವಿಯಾಗಲಿ” ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿಯವರು ಹೇಳಿದರು. ಕೋಟ ಪಟೇಲರ ಮನೆಯಲ್ಲಿ ಆಯೋಜಿಸಿದ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ: ಎಂ ಬಿ ಎ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
ಕುಂದಾಪುರ(ಫೆ.01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಜನವರಿ 29 ರಂದು ಆಯೋಜಿಸಲಾಗಿತ್ತು . ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆಯ ಪ್ರೊಫೆಸರ್ ಡಾ. ನಿಧೀಶ್ ರಾವ್ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ […]
ಫೆ.01 ರಿಂದ ಕಲರ್ಸ್ ಕನ್ನಡದಲ್ಲಿ ‘ಬಾಯ್ಸ್ v/s ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಶೋಗಳು
ಮಂಗಳೂರು(ಫೆ,1 ): ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಪ್ರಾರಂಭಿಸುತ್ತಿದೆ. ‘ಬಾಯ್ಸ್ v/s ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ .1ರಿಂದ ಪ್ರಸಾರ ಆರಂಭಿಸಲಿವೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ‘ಬಾಯ್ಸ್ ವಿ/ಎಸ್ ಗರ್ಲ್ಸ್’ ಹಾಗೂ ರಾತ್ರಿ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಕಲರ್ಸ್ […]
ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು : ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ
ಕುಂದಾಪುರ (ಫೆ,01): ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು, ಇಡೂರು ಕುಂಜ್ಞಾಡಿ ಈ ದೈವಸ್ಥಾನದ ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ ಕಾರ್ಯಕ್ರಮ ಇದೇ ಫೆಬ್ರವರಿ 2ರಿಂದ 4 ರ ತನಕ ನಡೆಯಲಿದೆ. ಆ ಪ್ರಯುಕ್ತ ಧೈವಿಕ,ಧಾರ್ಮಿಕ, ಸಾಂಸ್ಕೃತಿಕ,ಅನ್ನ ಪ್ರಸಾದ, ಸಭಾ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿದೆ. ಸಧ್ವಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಂಬಿದವರ ಮತ್ತು ಗ್ರಾಮಸ್ಥರ ಪರವಾಗಿ ಆಡಳಿತ ಮೊಕ್ತೆಸರಾದ […]