ಕುಂದಾಪುರ – ಜನವರಿ 23 : ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಇವರ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ದಿನದ ಅಂಗವಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜನವರಿ 23 ರ ಶನಿವಾರ ಜಯ್ ಹಿಂದ್ ರನ್ ಮ್ಯಾರಥಾನ್ ನಡೆಯಿತು. 200 ಕ್ಕೂ ಹೆಚ್ಚು ಜನ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು. ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಎಲ್ಲರೂ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾಗಿರುವ ಶ್ರೀ ರವಿಚಂದ್ರ ಶೆಟ್ಟಿ ಹಾಗೂ ಶ್ರೀ ರಾಜೇಶ್ ಖಾವಿ೯ ಮುಖ್ಯ ಶಿಕ್ಷಕರು ಆಶ್ರಮ ಶಾಲೆ ಬೈಂದೂರು ಇವರು ನೇತಾಜಿ ಯವರು ಯುವ ಜನತೆಗೆ ನೀಡಿದ ಸಂದೇಶದ ವಿಚಾರದ ಬಗ್ಗೆ ಮಾಹಿತಿ ನೀಡಿದರು.
ಕುಂದಾಪುರದ ಗಾಂಧಿ ಮೈದಾನದಿಂದ ಕೊನೆ ಬಸ್ಟಾಂಡ್ ಗೆ ತೆರಳಿ ಮತ್ತೆ ಗಾಂಧಿ ಮೈದಾನದ ವರೆಗೆ ಮ್ಯಾರಥಾನ್ ನಡೆಸಲಾಯಿತು. ಮ್ಯಾರಥಾನ್ ಪೂರ್ಣಗೊಳಿಸಿದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಬಟ್ಟೆ ಚೀಲ ನೀಡುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರದ ಸಂದೇಶವನ್ನು ನೀಡಲಾಯಿತು.
ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಸಿದರು. ಯುವಾ ಬ್ರಿಗೇಡ್ ಮುಖಂಡರಾಗಿರುವ ಶ್ರೀ ನಿರಂಜನ್ ತಲ್ಲೂರು,ಶ್ರೀ ಸತೀಶ್ ಗುಂಡ್ಮಿ,ಶ್ರೀ ಪ್ರಮೋದ್ ಶಂಕರನಾರಾಯಣ,ಹಾಗೂ ನಿತೇಶ್ ಶಂಕರನಾರಾಯಣ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀ ಸಚಿನ್ ಕಕ್ಕುಂಜೆ ನಿರೂಪಿಸಿದರು.