ಬೈಂದೂರು (ಅ, 31) : ಶ್ರೀ ಮಹಾಸತಿ ಯಕ್ಷಗಾನ ಚಿಕ್ಕಮೇಳ ನಾಯ್ಕನಕಟ್ಟೆ ಇದರ ಈ ವರ್ಷದ ಕೊನೆಯ ಸೇವೆಯಾಟ ನ,01ರಂದು ಮುಗಿಸುವುದೆಂದು ತಿಮ್ಮಪ್ಪ ದೇವಾಡಿಗ, ಸಂಚಾಲಕರಾದ ನಾಗರಾಜ್ ಭಟ್ ಹಾಗೂ ದೇವಸ್ಥಾನದ ಮುಕ್ತೇಶ್ವರರಾದ ನಾಗೇಂದ್ರ ಕಾರಂತರು ತಿಳಿಸಿರುತ್ತಾರೆ.
ಮೇಳಕ್ಕೆ ಸಂಪೂರ್ಣವಾಗಿ ಸಹಕರಿಸಿ ದೇವಿಯನ್ನು ಬರಮಾಡಿಕೊಂಡು ದೇವಿಯನ್ನು ಆರಾಧಿಸಿದ ಕುಂದಾಪುರ ತಾಲ್ಲೂಕಿನ ಕುಂದಾಪುರ ಪರಿಸರ ಹೇರಿಕುದ್ರು ,ಆನಗಳ್ಳಿ ,ಉಪ್ಪಿನಕುದ್ರು, ಸಬ್ಲಾಡಿ ಪಾರ್ತಿಕಟ್ಟೆ , ಜಾಲಾಡಿ, ಹೆಮ್ಮಾಡಿ, ಬಗ್ವಾಡಿ, ಕಟ್ ಬೆಲ್ತೂರು, ಹಟ್ಟಿಯಂಗಡಿ, ಹಟ್ಟಿಕುದ್ರು, ಜಾಡಿ, ಗುಡ್ಡಿಯಂಗಡಿ, ಕೋಟೆಬಾಗಿಲು, ಕೊಡ್ಲಾಡಿ , ಕನ್ಯಾನ, ತಲ್ಲೂರು, ಸುಳ್ಸೆ, ಕರ್ಕಿ, ಕೋಟೇಶ್ವರ, ಮಾರ್ಕೋಡು ಭಾಗಗಳಲ್ಲಿ ಮಳೆಗಾಲದಲ್ಲಿ ಸತತವಾಗಿ 4 ತಿಂಗಳು ನಡೆಯಬೇಕಿದ್ದರೆ ಶ್ರೀ ದೇವರ ಭಕ್ತರು ಹಾಗೂ ಯಕ್ಷಗಾನದ ಅಭಿಮಾನಿಗಳು ಇದಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಟ್ಟಿಕುದ್ರುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಮ್ಮ ಕಲಾವಿದರಿಗೆ ಸನ್ಮಾನ ಮಾಡಿದ ರಮೇಶ ಆಚಾರ್ಯ ನಾಗೇಂದ್ರ ಆಚಾರ್ಯ ಹಾಗೂ ರಾಘಆಚಾರ್ಯ, ಜಯಕರ ದೇವಾಡಿಗ, ವಾಸು ದೇವಾಡಿಗ, ಉದಯ ದೇವಾಡಿಗ, ಕಟ್ಟು ಗಣೇಶ್ ಶಾಮಿಯಾನ ಇವರಿಗೆ ಹ್ರತ್ಪೂರ್ವಕವಾದ ಧನ್ಯವಾದಗಳನ್ನು ಸಂಘಟಕರು ತಿಳಿಸಿದ್ದಾರೆ.
ವರದಿ: ಈಶ್ವರ್ ಸಿ ನಾವುಂದ