ಎತ್ತ ಸಾಗುವುದೀ ಪಯಣ ಹೊತ್ತು ಮುಳುಗುವ ಮುನ್ನ ಚಿತ್ತ ಧೃತಿಗೆಡದಿದ್ದರೆ ಸಾಕು ಮತ್ತೆ ಶೋಧಿಸಲು ಸಮಯವಾದೀತು…..!! ಕಳೆದೆವು ಅದೆಷ್ಟೋ ಕ್ಷಣಗಳ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯೇರಿ ಸಾಗಿದಷ್ಟೂ ದೂರ ಸೇರಿದಷ್ಟೂ ದಾರಿ….. ಸವಿದರೂ ಸವೆಯದ ಸ್ನೇಹವ ನೆನೆದು ಅಳುವುದೊಂದೆ ಉಳಿದಿದೆ ಇನ್ನೆಲ್ಲವ ನಾವಾಗಲೇ ಅಳಿಸಿಯಾಗಿದೆ. ಅನಂತತೆಯ ಅಲೆಯೊಂದು ಉದಯಿಸಿದೆ ಎದೆಯೊಳಗೆ ಸಾಗಲು ದೋಣಿ ಹಡಗುಗಳಿಲ್ಲ ಸೇರಲು ಸ್ನೇಹ ಸಂಬಂಧಗಳಿಲ್ಲ ತೀರ ಸಾಗರದಲ್ಲಿ ಒಂಟಿ ನಾನು….. ಮಾತಿನ ಶಿಖರಕ್ಕೀಗ ಮೌನದ ಮೆಟ್ಟಿಲು ಮೌನ ಉಸಿರು ಕಟ್ಟಿದರೂ ಮಾತಿಗೆ ಮರುಕ ನಿಶ್ಯಬ್ದ ಸಂತೆಯಲ್ಲಿ ಸ್ನೇಹದ ಮಾರಾಟ!!? ಬೆಲೆ ಕಟ್ಟಲಾಗದ ವಸ್ತುವಿಗೂ ಬೆಲೆಪಟ್ಟಿ ಯಾರಾದರೂ ಕೊಂಡುಕೊಳ್ಳಿ ನಿಮ್ಮ ಮನದಲ್ಲಾದರೂ ಜೀವ ತಳೆಯಲಿ………….
ಗಣೇಶ್ ಬಿ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಸ.ವಿ.ಪದವಿಪೂರ್ವ ಕಾಲೇಜು ಗಂಗೊಳ್ಳಿ