ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು.
ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ ಸ್ಥಾನಮಾನ ಕಲ್ಪಿಸುವವರು ಮಾತ್ರ ಯಾರು ಇಲ್ಲದಿರುವುದು ಇವರ ದುರ್ಭಾಗ್ಯವೇ ಸರಿ.ಜೀವ ರಕ್ಷಕ, ಮುಳುಗು ತಜ್ಞ ಆಪದ್ಭಾಂಧವ ಎಂದು ಜನರಿಂದ ಕರೆಯಲ್ಪಡುವ “ಈಶ್ವರ್ ಮಲ್ಪೆ” ಮತ್ತು “ಭಾಸ್ಕರ್ ತಲಗೋಡು” ಇವರುಗಳ ಕಥೆ ಮತ್ತು ವ್ಯಥೆಯನ್ನು ಇಗಾಗಲೇ ನಾವು ಕುಂದವಾಹಿನಿ ಅಂತರ್ಜಾಲ ಸುದ್ದಿತಾಣದ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇವೆ.
ಇಬ್ಬರ ಸಾಹಸ ಮತ್ತು ಕಥೆ ಮತ್ತು ವ್ಯಥೆಗೆ ಕೆಲವು ಸಂಘ-ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳು ದಾನಿಗಳು ಸಹಕರಿಸಿದನ್ನು ಗೌರವಪೂರ್ವಕ ನೆನೆಯುತ್ತ ನೆರವುವಾದವರನ್ನು ವಂದಿಸುತ್ತಾ ಮತ್ತೊಬ್ಬ ಈಜುಪಟು ಜೀವರಕ್ಷಕ ಮೀನುಗಾರ “ಸುರೇಶ್ ಖಾರ್ವಿ ಭಟ್ಕಳ್” ಇವರ ಕಥೆಯೊಳಗಿನ ವ್ಯಥೆಯನ್ನು ತಮ್ಮ ಮುಂದೆ ತೆರೆದಿಡುತ್ತಿದ್ದೇವೆ.
ತನ್ನ 17ನೇ ವಯಸ್ಸಿನಲ್ಲಿ ಮೀನುಗಾರಿಕೆ ಆರಂಭ ಮಾಡಿದ್ದ ಸುರೇಶ್ ಬಸವ ಖಾರ್ವಿ ಇಲ್ಲಿಯತನಕ ಸುಮಾರು ಹನ್ನೊಂದು ಜನರ ಪ್ರಾಣ ರಕ್ಷಿಸಿ ಅವರೆಲ್ಲರ ಕಣ್ಮಣಿಯಾಗಿದ್ದಾರೆ .ಇವರ ಸಹಸಮಯ ಜೀವನವನ್ನು ಜೀವನದತ್ತ ಒಮ್ಮೆ ಮೆಲುಕು ಹಾಕಲೇಬೇಕು.
ಮಂಗಳೂರಿನ ಪೂರ್ಣೇಶ್ವರಿ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದಲ್ಲಿ
ಸುಮಾರು 175 ಮೀಟರ್ ಆಳದಲ್ಲಿದ್ದ ಇವರ ಬೋಟ್ ರಾತ್ರಿ ಸುಮಾರು 11 ಮೂವತ್ತರ ಸುಮಾರಿಗೆ ಬೋಟಿನಿಂದ ಓರ್ವ ನೀರಿಗೆ ಬಿದ್ದು ಬಿಡುತ್ತಾನೆ.ತಮ್ಮೊಂದಿಗೆ ಕೆಲಸಮಾಡುತ್ತಿರುವವ ನೀರಿನಲ್ಲಿ ಬಿದ್ದು ಮುಳುಗುತ್ತಿರವುದನ್ನು ಸಹಿಸಲಾರದೆ ಇವರು ಜೀವದ ಹಂಗು ತೊರೆದು ನೀರಿಗೆ ಧುಮುಕುತ್ತಾರೆ. ಇನ್ನೇನು ಪ್ರಾಣ ಹೋಗುವ ಸಂಭವ ,ಉಳಿಸಲು ಅಂಗಲಾಚಿ ಸುವ ಆಕ್ರಂಧನ ನೋಡಿ ಸುಮ್ಮನಿರಲಾಗದೆ ಹರಿವ ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿರುವ ತನ್ನ ಸಹೋದ್ಯೋಗಿಯ ರಕ್ಷಿಸಿದ ತನ್ನ ಸಹೋದ್ಯೋಗಿಗೆ ಮರುಜೀವ ನೀಡಿದ ಸಂತಸ ಇವರ ಪಾಲಿಗೆ ಸೇರುತ್ತದೆ.
ನಂತರದ ದಿನಗಳಲ್ಲಿ ಕೂಡ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವಾಗಲೇ ಮತ್ತೊಬ್ಬರು ನೀರಿಗೆ ಬಿದ್ದು ಜೀವನ್ಮರಣದ ಒದ್ದಾಟದಲ್ಲಿದ್ದಾಗ ಅವರ ತಾಯಿಗೆ ತನ್ನ ನೋಡಲಾಗದೆ ಆಳ ಸಮುದ್ರದಲ್ಲಿ ನೀರಿಗೆ ಧುಮುಕಿ ಆಕ್ಸಿಜನ್ ಮತ್ತು ಆಧುನಿಕ ಯಾವುದೇ ರೀತಿಯ ಜೀವರಕ್ಷಕ ಸಾಧನಗಳಿಲ್ಲದೆ ರೋಪ್ ಮೂಲಕ ಅವರನ್ನು ರಕ್ಷಿಸಿ ಮರುಜೀವ ಕೊಟ್ಟು ಪುಣ್ಯಾತ್ಮ ಅನಿಸಿಕೊಳ್ಳುತ್ತಾರೆ.
ಭಟ್ಕಳದ ಮಾವಿನಕುರ್ವಿಯಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಮುಗುಚಿ ನೀರಿಗೆ ಬಿದ್ದ ಎಂಟು ಜನರನ್ನು ಕಾರ್ಗತ್ತಲಲ್ಲಿ ಸುಮಾರು ಒಂಬತ್ತು ತಾಸುಗಳ ಕಾಲ ಈಜಿ ಜೀವವನ್ನು ಹಿಡಿದಿಟ್ಟುಕೊಂಡಿದ್ದರು ಎಲ್ಲಾ 8 ಜನರನ್ನು ರಾತ್ರಿ ಕತ್ತಲೆಯಲ್ಲಿ ಹರಸಾಹಸ ಮಾಡಿ ಯಾವುದೇ ಸಾಧನಗಳಿಲ್ಲದೆ ರೋಪ್ ಮೂಲಕ ನೀರಿಗಿಳಿದು ಒಬ್ಬೊಬ್ಬರನ್ನೇ ತಂದು ಬೋಟಿನಲ್ಲಿ ಹಾಕಿ ರಕ್ಷಿಸುವಲ್ಲಿ ಇವರ ಪಾತ್ರ ಮಹತ್ವದಾಗಿದೆ. ಆ ಸಂದರ್ಭದಲ್ಲಿ ಪ್ರಾಣ ಅಪಾಯದಲ್ಲಿದ್ದ 8 ಜನರಿಗೂ ಇವರು ಇವರು ದೇವರಾಗಿ ಕಂಡರು ಅದು ಅತಿಶಯೋಕ್ತಿ ಎನಿಸಲಾರದು.
ಮಾವಿನಕುರ್ವೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿ ಮುಗುಚಿ ನಿರಂತರ ಒಂಬತ್ತು ಗಂಟೆಗಳ ಕಾಲ ಸಾವಿನೊಡನೆ ಮಾಡುತ್ತಿರುವವರನ್ನು ಸಮಯಪ್ರಜ್ಞೆ ಮೆರದು ಬದುಕಿಸಿದ ಕೀರ್ತಿ ಇವರದ್ದು .
ಭಟ್ಕಳ ಬಂದರಿನಿಂದ ಮೀನುಗಾರಿಕೆ ತೆರಳಿದವರು ಎಂಟು ಜನರು ಬೋಟ್ ರಾತ್ರಿ ಆದರೂ ವಾಪಸ್ಸು ಬರಲಿಲ್ಲ .ಇದನ್ನು ಮನಗಂಡು ಗೋಪಾಲ ಮೊಗೇರ ಇವರ ಮತ್ಸ್ಯ ದೀಪ ಬೋಟ್ ಎಂಟು ಜನರನ್ನು ಸಮಯಪ್ರಜ್ಞೆ ಮತ್ತು ಚಾಣಕ್ಷತನದಿಂದ ಸಾಹಸ ಮೆರೆದು ಒಬ್ಬೊಬ್ಬರನ್ನೇ ರೋಪ್ ಮೂಲಕ ಎತ್ತಿಕೊಂಡು ತನ್ನ ಬೋಟಿಗೆ ಹಾಕಿಕೊಂಡು ಅವರನ್ನು ದಡ ಮುಟ್ಟಿಸುತ್ತಾರೆ .
ಮೀನುಗಾರರು ಅಂದಕೂಡಲೇ ನೆನಪಾಗುವುದು ಸಮುದ್ರದ ಅಲೆಗಳು…, ಅವುಗಳ ನಡುವೆ ಅಲ್ಲಲ್ಲಿ ನಕ್ಷತ್ರಗಳಂತೆ ಸಂಚರಿಸುವ ಬೋಟುಗಳು…… ಆಗಾಗ ಅಲೆಯ ರಭಸಕ್ಕೆ ಕಣ್ಮರೆಯಾಗುವಂತೆ ಮತ್ತೆ ಗೋಚರಿಸುವ ಸಾಗುವ ಬೋಟುಗಳಲ್ಲಿ ಹತ್ತಾರು ಜೀವಗಳು ಸದಾ ಜೀವದ ಹಂಗು ತೊರೆದು ಕಾಯಕವೇ ಕೈಲಾಸ ಎನ್ನುವುದರೊಂದಿಗೆ ಮೀನುಗಾರಿಕೆಯಲ್ಲಿ ತೊಡಗಿ ಕೊಂಡಿರುತ್ತಾರೆ.
ಮೇ,1 ರಂದು 1976 ರಲ್ಲಿ ಭಟ್ಕಳದಲ್ಲಿ ಜನಿಸಿದ ಇವರು ಎಳೆವೆಯಿಂದಲೇ ಮೀನುಗಾರಿಕೆಯಲ್ಲಿ ಸತತ ಶ್ರಮ ನಿಷ್ಠತೆ ಇರುವ ಒಬ್ಬ ಕೆಲಸಗಾರ. ಬಸವ ಖಾರ್ವಿ ಮತ್ತು ಕುಪ್ಪು ದಂಪತಿಗಳಿಗೆ ನಾಲ್ಕು ಮಕ್ಕಳಲ್ಲಿ ಇಬ್ಬರು ಅಕ್ಕ ಒಬ್ಬ ತಮ್ಮ ನ ಒಡನಾಡಿ ಮೀನುಗಾರಿಕೆಯ ತೀರ ಬಡಕುಟುಂಬ. ಸುರೇಶ ಅವರ ಧರ್ಮಪತ್ನಿ ಮಹಾದೇವಿ ಮಕ್ಕಳು ರಂಜಿತ್ ಮತ್ತು ಸುಮಾ ಬಡತನದಲ್ಲೂ ಸುಖ ಆರಿಸುವ ಒಂದು ಸುಂದರ ಕುಟುಂಬ. ಭಟ್ಕಳ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎನ್ ಜೆ ಪಿ ಹೈಸ್ಕೂಲ್ ಭಟ್ಕಳ ಎಲ್ಲಿ 10ನೇ ತರಗತಿ ತನಕ ಓದಿರುವವರು ಸಾಹಸ ಪ್ರವೃತ್ತಿಯ ಇವರು ವೃತ್ತಿಯಲ್ಲಿ ಮೀನುಗಾರರು ಇಷ್ಟರತನಕ 11 ಜನರ ಜನರ ಜೀವ ರಕ್ಷಿಸಿದ ದೇವತಾ ಸ್ವರೂಪಿ ಮನುಷ್ಯ ಎಂದು ಕರೆದರು ತಪ್ಪಾಗಲಾರದು.
ಶುಭಾಷಿತಗಳಲ್ಲಿ ಹೇಳಿದಂತೆ ಎಲ್ಲಾ ಕಡೆಗೆ ಕಷ್ಟದಲ್ಲಿರುವವರನ್ನು ರಕ್ಷಿಸಲು ದೇವರಿಂದ ಸಾಧ್ಯವಿಲ್ಲ. ಇಂತಹ ಜೀವ ರಕ್ಷಕರು ಸೃಷ್ಟಿಸಿ ಈ ಮೂಲಕ ಆ ದೇವರೇ ಇವರ ಕೈಯಲ್ಲಿ ಈ ಕೆಲಸ ಮಾಡುತ್ತಿರಬಹುದೆ….?
ಅನ್ನಿಸಿಬಿಟ್ಟಿದೆ ನನಗೆ, ಈ ಮೂವರು *ಶ್ರೀ ಈಶ್ವರ್ ಮಲ್ಪೆಮತ್ತು ಭಾಸ್ಕರ್ ಕಳಸ* ಹಾಗೂ ಈಗ ಸುರೇಶ್ ಭಟ್ಕಳ್ ರಂತವರನ್ನು ಕಂಡು.!.
ಇವರ ಈ ಜೀವ ರಕ್ಷಣೆ ಈ ಸಮಾಜಸೇವೆ ಮತ್ತು ತನ್ನ ಜೀವದ ಹಂಗು ತೊರೆದು ಈ ರಕ್ಷಣಾ ಕಾರ್ಯದಲ್ಲಿ ಇವರ ತೊಡಗಿಕೊಳ್ಳುವುದು ಮೇಲ್ನೋಟಕ್ಕೆ ಇದೊಂದು ಸಮಾಜ ಕಾರ್ಯ ಅನಿಸಿದರು ರಕ್ಷಣೆಯ ಸಮಯದಲ್ಲಿ ತಮ್ಮ ಜೀವದ ಬಗ್ಗೆಯೂ ಜಾಗೃತರಾಗಿ ರುವುದು ಅಷ್ಟೇ ಮುಖ್ಯವಾಗಿರುತ್ತದೆ. ಇದೊಂದು ಸಾಹಸಮಯ ಕೆಲಸ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. ಜೀವರಕ್ಷಣೆ ಸಮಯದಲ್ಲಿ ಇವರು ಸ್ವಲ್ಪ ಯಾಮಾರಿದರೂ ತನ್ನ ಜೀವ ಕಳೆದುಕೊಳ್ಳುವ ಸಂಭವವಿರುತ್ತದೆ.
ಮಂಕಾಳ ಎಸ್ ವೈದ್ಯ ವಿಧಾನಸಭಾ ಸದಸ್ಯರು, ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಶ್ರೀ ಸುರೇಶ್ ಬಸವ ಖಾರ್ವಿ ಮಾವಿನಕುರ್ವೆ ಇವರಿಗೆ “ಜೀವನ ರಕ್ಷ” ಪದಕ ಪ್ರಶಸ್ತಿ ಶಿಫಾರಸು ಮಾಡುವ ಕುರಿತು ಪತ್ರ ಬರೆದಿರುವ ದಾಖಲೆ ಸುರೇಶ್ ರವರಬಳಿ ಇದೆ.
ಕೆ. ಗೋಪಾಲ ಪೂಜಾರಿ ಮಾಜಿ ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆ ಇವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರಾಷ್ಟ್ರಪತಿ ಜೀವರಕ್ಷಕ ಪದಕ ಸಲ್ಲಿಸಿರುವ ಉತ್ತರಕನ್ನಡ ಜಿಲ್ಲೆ ಭಟ್ಕಳ ನಿವಾಸಿ ಸುರೇಶ್ ಬಸವ ಖಾರ್ವಿ ಇವರನ್ನು ಪ್ರಶಸ್ತಿಗೆ ಶಿಫಾರಸು ಮಾಡುವ ಕುರಿತು ಪತ್ರ ಬರೆದಿರುತ್ತಾರೆ.
ಶಾರದಾ ಮೋಹನ ಶೆಟ್ಟಿ ಶಾಸಕರು ಕುಮಟಾ-ಹೊನ್ನಾವರ ಕ್ಷೇತ್ರ ಉತ್ತರ ಕನ್ನಡ ಇವರು ಕೂಡ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ಸುರೇಶ್ ರವರಿಗೆ ರಾಷ್ಟ್ರಪತಿ ಜೀವರಕ್ಷಕ ಪದಕ ಪ್ರಶಸ್ತಿಗೆ ಶಿಪಾರಸ್ಸು ಮಾಡುವ ಕುರಿತು ಪತ್ರ ಬರೆದಿರುವುದನ್ನು ಶ್ರೀಯುತರು ನೆನಸಿಕೊಂಡಿದ್ದಾರೆ. ಪ್ರಮೋದ್ ಮಧ್ವರಾಜ್ ಮೀನುಗಾರಿಕೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಾಜಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾಗ ರಾಷ್ಟ್ರಪತಿ ಜೀವರಕ್ಷಕ ಪದಕಕ್ಕೆ ಅರ್ಜಿ ಸಲ್ಲಿಸಿರುವ ಪತ್ರಗಳನ್ನು ಇಟ್ಟುಕೊಂಡು ಸುರೇಶ್ ಅವರು ಪ್ರಶಸ್ತಿ-ಗೌರವಗಳು ಬರದೇ ಆಕಾಶವನ್ನೇ ನೋಡುತ್ತ ನಿಂತಿದ್ದಾರೆ.
ಸಂಸದ ಅನಂತ್ ಕುಮಾರ್ ಹೆಗಡೆ,ಸುರೇಶ್ ಭಟ್ಕಳ್ ಇವರು ಮಾಡುತ್ತಿರುವ ಸಮಾಜ ಸೇವೆಯನ್ನು ಗಮನಿಸಿ ಅಭಿನಂದಿಸುವುದು ಜೊತೆಗೆ ಇವರಿಗೆ ಪ್ರಶಸ್ತಿ ಕೊಡುವ ಸಲುವಾಗಿ ಕೇಂದ್ರ ಸರಕಾರಕ್ಕೂ ಪತ್ರ ಬರೆದಿರುವುದು ಈ ದಾಖಲೆಗಳನ್ನು ಸುರೇಶ್ ರವರು ಇವಾಗಲು ಇಟ್ಟುಕೊಂಡಿರುತ್ತಾರೆ.
ಆರ್.ಎನ್.ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ಟ್ರಸ್ಟ್ ಶ್ರೀಯುತ ಸುರೇಶ್ ಇವರನ್ನು ಅಭಿನಂದಿಸುವುದು. ಜೊತೆಗೆ ಇವರ ಶ್ರಮಕ್ಕೆ ತಕ್ಕ ಪ್ರಶಸ್ತಿ ಮತ್ತು ಬಹುಮಾನವನ್ನು ಕೊಡುವ ವಿಚಾರವಾಗಿ ಪತ್ರ ಬರೆದಿರುವುದು ಅದರ ದಾಖಲೆ ಕೂಡ ಇಟ್ಟುಕೊಂಡು ಸರಕಾರದ ಸಿಗುವ ಸವಲತ್ತುಗಳ ಬಗ್ಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಟ್ರಸ್ಟ್ ಇವರ ಸಮಾಜ ಸೇವಾ ಕಾರ್ಯವನ್ನು ಗುರುತಿಸಿ ಅಭಿನಂದಿಸಿ,ಸನ್ಮಾನಿಸಿ ಸರ್ಕಾರದ ಗಮನವನ್ನು ಸೆಳೆದಿರುತ್ತಾರೆ. ಧರ್ಮಸ್ಥಳ ಧರ್ಮದರ್ಶಿ ಡಾ ಡಿ.ವೀರೇಂದ್ರ ಹೆಗ್ಗಡೆ ಯವರು ಸುರೇಶ್ ಖಾರ್ವಿಯವರ ಪುಣ್ಯ ಕಾರ್ಯವನ್ನು ಹೊಗಳುವುದರ ಜೊತೆಗೆ ಆಶೀರ್ವದಿಸಿದ್ದಾರೆ.
ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಬಿ ನಾಯ್ಕ್ ಇವರು ಮಾಡುವ ಜೀವ ರಕ್ಷಣಾ ಕಾರ್ಯಕ್ಕೆ ಸರಕಾರವು ಜೀವರಕ್ಷಕ ಪದಕ ನೀಡಿ ಸನ್ಮಾನಿಸಬೇಕು ಎಂದು ಕೋರಿ ಬರೆದಿರುವ ಪತ್ರವು ಕೂಡ ಶ್ರೀಯುತರು ಇಂದಿಗೂ ಜೊತೆ ಇಟ್ಟುಕೊಂಡು ಕಾಪಾಡಿಕೊಂಡು ಬಂದಿರುತ್ತಾರೆ. ಆದರೆ ಸರಕಾರವಾಗಲಿ ಸಂಬಂಧಪಟ್ಟ ವ್ಯಕ್ತಿಗಳಾಗಲಿ ಯಾರು ಗಮನಿಸದೆ ಸರಕಾರದಿಂದ ಸಿಗುವ ಯಾವುದೇ ರೀತಿಯ ಸವಲತ್ತುಗಳನ್ನು ಇವರಿಗೆ ಸಿಗದಿರುವದೇ ವಿಪರ್ಯಾಸ ಹಾಗೂ ನೋವಿನ ಸಂಗತಿ.ಸುರೇಶ್ ಭಟ್ಕಳ್ ರವರು ತನ್ನ ಎಲ್ಲಾ ದಾಖಲೆ ಮತ್ತು ಪತ್ರಗಳನ್ನು ಜೋಪಾನವಾಗಿಟ್ಟುಕೊಂಡು ಎಲ್ಲರಿಗೂ ಪಾಪ ತೋರಿಸುತ್ತಾ ನೋವನ್ನು ಹೇಳಿಕೊಳ್ಳಲು ನೋಡಿದಾಗ ಅಯ್ಯೋ ಅನಿಸುತ್ತದೆ.
ಇಂತವರ ಬಗ್ಗೆ ಸರಕಾರ ಯಾಕೆ ಗಮನಕೊಡುವುದಿಲ್ಲ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಇವರೇ ಹೇಳುವ ಪ್ರಕಾರ ಅವರಿಗೆ 17 ವರ್ಷ ಇರುವಾಗಲೇ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿರುವ ಶ್ರಮಜೀವಿ 45ರ ಆಸುಪಾಸಿನಲ್ಲಿರುವ ಇವರು ಇನ್ನು ದುಡಿದರೆ ಮೂರ್ನಾಲ್ಕು ವರ್ಷ ನಾನು ದುಡಿಯಬಹುದು, ಸರಕಾರ ನನಗೆ ಜೀವನ ನಡೆಸಲು ಸವಲತ್ತು ಮಾಡಿಕೊಟ್ಟರೆ ಮಾಸಿಕ ಗೌರವಧನ ನೀಡುವುದಾದರೆ ಮುಂದಿನ ದಿನಗಳಲ್ಲಿ ತನ್ನ ಹುಟ್ಟೂರಿನಲ್ಲಿ ನೀರಿಗೆ ಬಿದ್ದವರು ಮತ್ತು ಅಪಾಯದಲ್ಲಿರುವ ಅವರಿಗೆ ನನ್ನಿಂದ ಆಗುವ ಸೇವೆ ಮಾಡುವ ಸಂಕಲ್ಪವನ್ನು ಹೊಂದಿರುತ್ತೇನೆ ಎಂದು ಸಂತಸದಿಂದಲೇ ಹೇಳಿಕೊಂಡರು.
ಆದರೆ ಅವರ ಸೋದರಿ ಮತ್ತು ಪತ್ನಿ ಇಂಥ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ನಿಮಗೆ ಏನಾದರೂ ಆದರೆ ನಮ್ಮ ಗತಿಯೇನು ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ ಸರ್…ಎಂದು ನುಡಿದು
ಒಂದೆರಡು ನಿಮಿಷ ನನ್ನ ಮುಖವನ್ನೇ ನೋಡುತ್ತ ಕುಳಿತುಬಿಟ್ಟರು ಇದಕ್ಕೆ ಉತ್ತರ ನನ್ನಲ್ಲಿ ಕೂಡ ಇರಲಿಲ್ಲ!
ಇವರ ಇವರ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಕೊಡಬೇಕಾಗಿ ಕೇಳಿಕೊಳ್ಳುತ್ತಾ ಹಾಗೂ ಇವರ ಶ್ರಮಕ್ಕೆ ತಕ್ಕ ಪ್ರಶಸ್ತಿ ಸನ್ಮಾನಗಳು ದೊರೆಯಲಿ ಇದರಿಂದ ಅವರು ಇನ್ನೂ ಮುಂದೆಯೂ ಸಾಮಾಜಿಕ ಕಾರ್ಯ ಮಾಡುವುದರಲ್ಲಿ ಮುನ್ನುಗ್ಗಿ ಧೈರ್ಯ ಬರಲಿ ಉತ್ಸಾಹ ಬರಲಿ ಅನ್ನುವುದೇ ಬರಹದ ಆಶಯವಾಗಿರುತ್ತದೆ.
ಸುರೇಶ್ ಖಾರ್ವಿ ಭಟ್ಕಳ
ಈಜು ಸಾಹಸಿ ಮತ್ತು ಜೀವರಕ್ಷಕ
8971999413
ಲೇಖನ : ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರ.
9833259692.