ಮಾರಣಕಟ್ಟೆ (ನ,30): ಮಹಾಲಿಂಗೇಶ್ವರ ದೇವಸ್ಥಾನ ನೈಕಂಬ್ಳಿಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನ,29ರಂದು ಜರುಗಿತು.
ದೀಪೋತ್ಸವ ಪ್ರಯುಕ್ತ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನೆ , ಮಹಾ ಮಂಗಳಾರತಿ ಹಾಗೂ ಅನ್ನಪ್ರಸಾದ ಸೇವೆ ನೆರವೇರಿತು. ಜೀರ್ಣೋದ್ಧಾರ ಸಮಿತಿ ಪ್ರಮುಖರು, ಪ್ರೇರಣಾ ಯುವ ವೇದಿಕೆ ಸದಸ್ಯರು, ಊರ ಗಣ್ಯರು ಉಪಸ್ಥಿತರಿದ್ದರು.