ಕುಂದಾಪುರ(ಡಿ, 12): ಕುಂಭಾಶಿ ಸಮೀಪದ ವಕ್ವಾಡಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೃಷ್ಣ ಐತಾಳ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂಬ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಸ್ವರಾಜ್ಯ 75 ತಂಡ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಯಿತು.
ಶ್ರೀ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಯವರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶಪ್ರೇಮ ನಾವು ಪ್ರತಿದಿನ ಸ್ಮರಿಸಬೇಕು ಹಾಗೂ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಮನೆಯ ಬಗ್ಗೆ ಕಳಕಳಿಯನ್ನು ತೋರಿಸಬೇಕು ಎಂಬುದಾಗಿ ತಿಳಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ ವಹಿಸಿದ್ದು ,ಅತಿಥಿಯವರಾಗಿ ರಮೇಶ್ ವಕ್ವಾಡಿ, ಲೀಲಾವತಿ ಐತಾಳ್ ಉಪಸ್ಥಿತರಿದ್ದರು .
ಕಾರ್ಯಕ್ರಮ ದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಗರ ಕೊಡುಗೆ ಎಂಬ ವಿಚಾರದ ಬಗ್ಗೆ ರಾಘವೇಂದ್ರ ಹರ್ಕಾಡಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣ ಐತಾಳ್ ರವರ ದೇಶಸೇವೆಯ ಕುರಿತು ಶ್ರೀನಿವಾಸ ಅಡಿಗ ಮಾತನಾಡಿದರು.
ಈ ವಿನೂತನ ಕಾರ್ಯಕ್ರಮದಲ್ಲಿ ಸ್ವರಾಜ್ಯ ೭೫ ರ ಕಾರ್ಯಕ್ರಮದ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು,ಹಿರಿಯ ಸಾಹಿತಿಗಳಾದ ಎ ಎಸ್ ಎನ್ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸುರೇಂದ್ರ ಅಡಿಗ, ಕೋಟಿಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಪ್ರಭಾಕರ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಲತಾ , ಗಿರೀಶ್ ಐತಾಳ್, ಅಕ್ಷತಾ ಗಿರೀಶ್ ಐತಾಳ್,ಮಹೇಶ ಐತಾಳ್ ,ವಾಣಿಶ್ರೀ ಐತಾಳ್, ಊರಿನ ಹಿರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ವನ್ನು “ಸ್ವರಾಜ್ಯ ೭೫” ತಂಡ ಆರನೇ ಮನೆಯಾಗಿ ಕೃಷ್ಣ ಐತಾಳ್ ರವರಮನೆಯನ್ನು ಗುರುತಿಸಿದ್ದು,ಇವರಿಗೆ ಜನಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು,ಅಭಿವೃದ್ಧಿ ಸಂಸ್ಥೆ ಸಂಸ್ಥೆ ಹಂಗಾರಕಟ್ಟೆ, ಸಹಕಾರ ನೀಡಿತ್ತು . ಶ್ರೀ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಧನ್ಯವಾದಗೈದರು. ಆಶಾಲತಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು.